Sunday, May 5, 2024
spot_imgspot_img
spot_imgspot_img

ಪುತ್ತೂರಿನಿಂದ ಅಪಹರಣವಾದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಆಗುಂಬೆ ಘಾಟ್‌ ನಲ್ಲಿ ಪತ್ತೆ ಪ್ರಕರಣ- 3 ಆರೋಪಿಗಳ ಬಂಧನ, ಪ್ರಕರಣಕ್ಕೆ ಬಳಸಿದ ವಾಹನ ವಶ.

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರಿನಿಂದ ಅಪಹರಣವಾದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಆಗುಂಬೆ ಘಾಟ್‌ ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಬಂಧಿಸಿದ್ದಾರೆ ಹಾಗೂ ಪ್ರಕರಣಕ್ಕೆ ಬಳಸಿದ ಮಹೀದ್ರ ಮಾಕ್ಸಿಮೋ ವಾಹನ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಮಾರು ಹತ್ತಕ್ಕೂ ಅಧಿಕ ಜೆಸಿಬಿ ಹೊಂದಿರುವ ಕುಂಬ್ರದ ಉದ್ಯಮಿಯೋರ್ವರ ಜೆಸಿಬಿ ಆಪರೇಟರ್‌ನನ್ನು ಕಿಡ್ನಾಪ್ ಮಾಡಿ, ಅನೈತಿಕ ಸಂಬಂಧದ ಕಾರಣದಿಂದಾಗಿ ಕೊಲೆಗೈದು ಆಗುಂಬೆ -ಘಾಟ್ ನಲ್ಲಿ ಬೀಸಾಡಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಕುಂಬ್ರ ಮೂಲದ ಜೆಸಿಬಿ ಮಾಲಕ, ಉದ್ಯಮಿ ಮೋಹನ್‌ದಾಸ್ ರೈ ಜೊತೆ ಜೇಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಹನುಮಂತ (22) ಎಂಬವನ ಕಿಡ್ನಾಪ್ ಆರೋಪಿಗಳಾದ ಶಿವಪ್ಪ, ಮಂಜುನಾಥ , ದುರ್ಗಪ್ಪ ನನ್ನು ಕೆಎ-26-ಬಿ-3833 ನೇ ನಂಬ್ರದ ಮಹೀದ್ರ ಮಾಕ್ಸಿಮೋ ವಾಹನದಲ್ಲಿ ಬಂದು ಅಪಹರಿಸಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಬಗ್ಗೆ ರವಿ.ಬಿಎಸ್ ಪಿಐ ಪುತ್ತೂರು ಗ್ರಾಮಾಂತರ ಠಾಣೆ ರವರು ವಿಶೇಷ ತಂಡವನ್ನು ನೇಮಿಸಿದ್ದು, ಈ ತಂಡವು ಶಿವಮೊಗ್ಗ, ಬಾಗಲಕೋಟೆ, ಬಾದಾಮಿ, ಗದಗ,ಹುಬ್ಬಳ್ಳಿ, ದಾರವಾಡ, ಬೆಳಗಾವಿ, ಬೆಂಗಳೂರು, ಕೋಲಾರ ಕಡೆಗಳಲ್ಲಿ ಸಂಚರಿಸಿ ಆರೋಪಿತರಾದ ಶಿವಪ್ಪ ಹನುಮಂತ ಮಾದರ್,ಮಂಜುನಾಥ ಮಾದರ್ , ದುರ್ಗಪ್ಪ ಮಾದರ ರವರನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ ದಾರಿಮದ್ಯೆ ಕೊಲೆ ಮಾಡಿ ಆಗುಂಬೆ ಕಾಡಿಗೆ ಬಿಸಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾರೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ನಂತರ ಆರೋಪಿಗಳು ಆಗುಂಬೆ ಘಾಟಿಯಲ್ಲಿ ಮೃತದೇಹವನ್ನು ಬಿಸಾಡಿರುವ ಜಾಗವನ್ನು ತೋರಿಸಿಕೊಟ್ಟಿದ್ದು, ಆಗುಂಬೆ ಘಾಟಿಯ 13 ನೇ ತಿರುವಿನಲ್ಲಿ ಕೊಲೆಯಾದ ಹನುಮಂತನ ಮೃತ ದೇಹವು ಕೊಳೆತ ರೀತಿಯಲ್ಲಿ ಪತ್ತೆಯಾಗಿರುತ್ತದೆ.

ಈ ಪ್ರಕರಣದ ಎರಡನೇ ಆರೋಪಿ ದುರ್ಗಪ್ಪ ಮಾದರ ಎಂಬಾತನನ್ನು ವಿಶೇಷ ತಂಡವು ದಿನಾಂಕ:12-12-2023ರಂದು ಬಂದಿಸಿ, ಪ್ರಕರಣಕ್ಕೆ ಉಪಯೋಗಿಸಿದ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.ಈ ಕೊಲೆ ಪ್ರಕರಣಕ್ಕೆ ಶಿವಪ್ಪ ಹನುಮಂತ ಮಾದರ್ ರವರ ಪತ್ನಿಗೆ ಮತ್ತು ಕೊಲೆಯಾದ ಹನುಮಂತನಿಗೂ ಅನೈತಿಕ ಸಂಬಂದ ಇದ್ದು, ಇದೇ ಕಾರಣಕ್ಕೆ ಹನುಮಂತನನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಆರೋಪಿತರು ತಪ್ಪೊಪ್ಪಿಕೊಂಡಿರುತ್ತಾರೆ.

ಈ ಪೂರ್ವ ಯೋಜಿತ ಕೃತ್ಯದಂತೆ ಕಂಡು ಬರುವ ಪ್ರಕರಣವನ್ನು ಪುತ್ತೂರು ತಾಲೂಕು ಕುಂಬ್ರದಿಂದ ಅಪಹರಿಸಿ ಕೊಲೆ ಮಾಡಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಆಗುಂಬೆ ಘಾಟಿಯ 13 ನೇ ತಿರುವಿನಲ್ಲಿ ಶವವನ್ನು ಬಿಸಾಕಿರುವ ಪ್ರಕರಣದಲ್ಲಿ ಆರೋಪಿತರು ಯಾವುದೇ ಸುಳಿವು ಬಿಡದೇ ತಲೆ ಮರಸಿಕೊಂಡಿದ್ದು, ಪ್ರಕರಣವನ್ನು ಬೇಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ತಂಡ ಎರಡು ವಾರಗಳಲ್ಲಿ ಹಗಲು ರಾತ್ರಿ ನಿರಂತರವಾಗಿ ಪ್ರಯಾಣಿಸಿ ಮಾಹಿತಿ ಸಂಗ್ರಹಿಸಿರುತ್ತಾರೆ. ಈ ಪ್ರಕರಣವನ್ನು ಬೇಧಿಸುವಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್ ಸಿ.ಬಿ ಮತ್ತು ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕರಾದ ಅರುಣ್ ನಾಗೇ ಗೌಡರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ ಬಿಎಸ್ ರವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪಿಎಸೈ ಅಕ್ಷಯ್ ಡವಗಿ ಎಎಸ್ಕೆ ಮುರುಗೇಶ್ ಬಿ, ಶ್ರೀಧರ ರೈ ಸಿಬ್ಬಂದಿಯವರಾದ ಅದ್ರಾಮ, ಹರೀಶ್ ಜಿ.ಎನ್. ಸಲೀಂ, ಪ್ರವೀಣ್ ರೈ, ದಯಾನಂದ. ವಸಂತ ಗೌಡ, ಸತೀಶ್ ಎನ್. ಮುನಿಯಾ ನಾಯ್ಕ, ನಾಗೇಶ್ ಕೆ.ಸಿ. ಜಗದೀಶ್ ಅತ್ತಾಜೆ ಚಾಲಕರಾಗಿ ಯೋಗೀಶ್ ನಾಯ್ಕ, ಹರೀಶ್ ನಾಯ್ಕ ಪ್ರವೀಣ್ ಹಾಗೂ ಜಿಲ್ಲಾ ಗಣಕಂತ್ರ ವಿಭಾಗದ ದಿವಾಕರ್ ಮತ್ತು ಸಂಪತ್ ರವರು ಸಹಕರಿಸಿರುತ್ತಾರೆ

- Advertisement -

Related news

error: Content is protected !!