Sunday, May 19, 2024
spot_imgspot_img
spot_imgspot_img

ಕಡಲ ತೀರಕ್ಕೆ ತೇಲಿಬಂದ ಬಲೀನ್‌ ತಿಮಿಂಗಲದ ಮೃತದೇಹ..!

- Advertisement -G L Acharya panikkar
- Advertisement -

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಲೀನ್ ವೇಲ್ ಎಂದು ಗುರುತಿಸಲ್ಪಡುವ ಈ ತಿಮಿಂಗಲ ಸುಮಾರು 46 ಫೀಟ್ ಉದ್ದ, 9 ಫೀಟ್ ಎತ್ತರವಿದೆ. ಸಾಮಾನ್ಯವಾಗಿ 10ಮೀಟರ್‌ನಿಂದ 102ಮೀಟರ್‌ವರೆಗೆ ಈ ಬಲೀನ್ ಜಾತಿಯ ತಿಮಿಂಗಿಲ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಅತೀ ವಿರಳವಾಗಿ ಕಾಣುವ ಹಾಗೂ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ತಿಮಿಂಗಿಲವಾಗಿದೆ.

ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರು ಬೃಹತ್‌ ಗಾತ್ರದ ತಿಮಿಂಗಲ ಮೃತದೇಹವನ್ನು ನೋಡಿದ್ದಾರೆ. ನಂತರ ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇನ್ನು ತಿಮಿಂಗಲವು ಮೃತಪಟ್ಟು ಹಲವು ದಿನ ಕಳೆದ ಬಳಿಕ ದಡಕ್ಕೆ ಬಂದು ಬಿದ್ದಿರುವ ಶಂಕೆಯಿದೆ. ತಿಮಿಂಗಿಲದ‌ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿಯಲಿದೆ.

ಸಮುದ್ರದ ತಣ್ಣನೆಯ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಸಂತಾನೋತ್ಪತ್ತಿ ವೇಳೆ ಈ ತಿಮಿಂಗಿಲಗಳು ಬರುತ್ತವೆ. ನೇತ್ರಾಣಿ ದ್ವೀಪ ಹಾಗೂ ಮುಗಳಿ ಕಡಲಧಾಮದ ಬಳಿ ಇವು ಹೆಚ್ಚಾಗಿ ವಲಸೆ ಬರುತ್ತವೆ. ಈ ವೇಳೆ ಶಾರ್ಕ್ ಮೀನುಗಳ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆಯೂ ಇರಬಹುದು ಎಂದು ಕಡಲಜೀವಶಾಸ್ತ್ರ ಸಂಶೋಧಕ ಪ್ರಕಾಶ್ ಮೇಸ್ತ ತಿಳಿಸಿದ್ದಾರೆ.

- Advertisement -

Related news

error: Content is protected !!