Saturday, May 4, 2024
spot_imgspot_img
spot_imgspot_img

ಬೋರ್​​ವೆಲ್​​ಗೆ ಬಿದ್ದು ಬಾಲಕಿ ಮೃತ್ಯು..!

- Advertisement -G L Acharya panikkar
- Advertisement -

ಬೋರ್​​ವೆಲ್​​ನಲ್ಲಿ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ ತಕ್ಷಣ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿರುವ ಘಟನೆ ಗುಜರಾತ್​ನ ದ್ವಾರಕ ಜಿಲ್ಲೆಯ ರನ್ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿ ಏಂಜೆಲ್ ಸಖ್ರಾ (3) ಎಂದು ಗುರುತಿಸಲಾಗಿದೆ.

ಮನೆಯ ಅಂಗಳದಲ್ಲಿ ಆಟವಾಡುತ್ತಿರುವಾಗ ಅಲ್ಲಿಯೇ ಇದ್ದ ತೆರೆದ ಬೋರ್‌ವೆಲ್‌ಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಲಕಿ ಬಿದ್ದಿದ್ದಳು. ಇದನ್ನು ಕಂಡಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಮಾಹಿತಿ ಎಲ್ಲ ಕಡೆ ಹಬ್ಬುತ್ತಿದ್ದಂತೆ ಜಿಲ್ಲಾಡಳಿತದಿಂದ ರಕ್ಷಣೆ ಕಾರ್ಯ ಕೈಗೊಳ್ಳಲಾಗಿತ್ತು. ಇದರಲ್ಲಿ ಇಂಡಿಯನ್ ಆರ್ಮಿ ಮತ್ತು ಎನ್​ಡಿಆರ್​​ಎಫ್, ಅಗ್ನಿಶಾಮಕ​ ಸಿಬ್ಬಂದಿ ಕೂಡ ಭಾಗಿಯಾಗಿದ್ದರು.

ಸತತ 8 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಮಾಡಿ ರಾತ್ರಿ 10:15ರ ಸುಮಾರಿಗೆ 35 ಫೀಟ್ ಆಳಕ್ಕೆ ಬಿದ್ದಿದ್ದ ಬಾಲಕಿಯನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣ ಖಂಭಾಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್​​ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆಯೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಬಾಲಕಿ ಸಾವಿಗೆ ಆಮ್ಲಜನಕದ ಕೊರತೆಯೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!