Monday, April 29, 2024
spot_imgspot_img
spot_imgspot_img

ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು..!

- Advertisement -G L Acharya panikkar
- Advertisement -

ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡ ಪುಟ್ಟ ಮಗು ತಲೆಗೆ ತೀವ್ರವಾಗಿ ಗಾಯಗೊಂಡಿದ್ದು ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿ ಕೇರಳ ಮೂಲದ ಟೆಕ್ಕಿ ದಂಪತಿ ಜಿಟೋ ಟಾಮಿ ಜೋಸೆಫ್, ಬಿನಿಟೋ ಥಾಮಸ್ ಪುತ್ರಿ ಜೀನಾ (4) ಎಂದು ಗುರುತಿಸಲಾಗಿದೆ.

ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಡಿ ಬರುವ ಖಾಸಗಿ ಪ್ರಿ ಸ್ಕೂಲ್‌ ನಲ್ಲಿ ಕಲಿಯುತ್ತಿದ್ದ ಜೀನಾ ಜನವರಿ 22ರ ಮಧ್ಯಾಹ್ನ ಜೀನಾ ಮಹಡಿ ಮೇಲೆ ಆಡುತ್ತಿದ್ದಾಗ ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಮಗುವನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.

ಖಾಸಗಿ ಡೆಲ್ಲಿ ಪ್ರಿ ಸ್ಕೂಲ್‌ನ ನರ್ಸರಿ ವಿಭಾಗದಲ್ಲಿ ಈ ಘಟನೆ ನಡೆದಿದೆ. ಪುಟ್ಟ ಮಕ್ಕಳ ಶಾಲೆಯನ್ನು ಮೂರನೇ ಮಹಡಿಯಲ್ಲಿ ನಡೆಸಿದ್ದು, ಮಕ್ಕಳು ಮಹಡಿಯಿಂದ ತಡೆ ಗೋಡೆ ಹತ್ತಿ ಹೊರಗೆ ಬಿದ್ದರೂ ಗಮನಿಸದೆ ಇರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಮಗು ಬಿದ್ದು ಗಾಯಗೊಂಡ ನಿಜವಾದ ಕಾರಣವನ್ನು ಕೂಡಾ ಶಾಲೆ ಮುಚ್ಚಿಟ್ಟಿತ್ತು ಎನ್ನಲಾಗಿದೆ. ಹೀಗಾಗಿ ನಿರ್ಲಕ್ಷ್ಯ ಮತ್ತು ಸರಿಯಾದ ಮಾಹಿತಿ ನೀಡದೆ ವಾಸ್ತವಾಂಶ ಮುಚ್ಚಿಟ್ಟಿದ್ದಕ್ಕಾಗಿ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!