Friday, June 5, 2026
spot_imgspot_img
spot_imgspot_img

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ..!

- Advertisement -
- Advertisement -

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಫುಟ್ ಪಾತ್​ಗೆ ಏರಿ ಅಂಗಡಿಗೆ ನುಗ್ಗಿದ ಘಟನೆ ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಅಪಘಾತದ ವೇಳೆ ಸವಾರನೊಬ್ಬ ರಸ್ತೆಯ ಬದಿ ಬೈಕ್ ನಿಲ್ಲಿಸುತ್ತಿದ್ದ. ಇದೇ ವೇಳೆ ಯಮನಂತೆ ಬಂದ ಪಿಕಪ್ ವಾಹನವು ಏಕಾಏಕಿ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಗುದ್ದಿದೆ. ಬಳಿಕ ಅಂಗಡಿಗೆ ನುಗ್ಗಿದೆ. ಪರಿಣಾಮ ಬೈಕ್​ ಸವಾರನ ಕಾಲು ಮುರಿತವಾಗಿದೆ. ಕೂಡಲೇ ಗಾಯಾಗೊಂಡ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತದೆ.

ಈ ಘಟನೆ ಬಗ್ಗೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೂಡ್ಸ್ ವಾಹನ ಫುಟ್ ಪಾತ್​ಗೆ ಏರಿ ಅಂಗಡಿಗೆ ನುಗ್ಗಿದ ಘಟನೆಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!