Sunday, July 19, 2026
spot_imgspot_img
spot_imgspot_img

ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆ ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಮತ್ತೊಮ್ಮೆ ಪ್ರಸ್ತುತಪಡಿಸುತ್ತಿದೆ ವಿನೂತನ ಸ್ಪರ್ಧೆ

- Advertisement -
- Advertisement -

ದಂಪತಿಗಳಿಗೋಸ್ಕರ ನಡೆಯಲಿದೆ ಆನ್ಲೈನ್ ಫೋಟೋ ಸ್ಪರ್ಧೆ "ರಾಜ -ರಾಣಿ 2025"

ವಿಟ್ಲ: ಕಳೆದ ಮೂರು ವರ್ಷಗಳಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆ ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡವು ವಿನೂತನ ಶೈಲಿಯೊಂದಿಗೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾಂಸ್ಕೃತಿಕ ರಂಗದಲ್ಲಿ ವಿಭಿನ್ನತೆಯನ್ನು ಸಾರಲು ಮುಂದಾಗಿದೆ.


ಹಲವಾರು ವೇದಿಕೆಗಳಲ್ಲಿ ನೃತ್ಯ ಸಂಗೀತ, ನಾಟಕ ಹೀಗೆ ಎಲ್ಲಾ ಪ್ರಕಾರದ ಸಾಂಸ್ಕೃತಿಕ ವೈಭವಗಳನ್ನು ಪ್ರದರ್ಶಿಸಿ, ತನ್ನದೇ ವಿಶೇಷ ಶೈಲಿಯೊಂದಿಗೆ ಜನಮನ್ನಣೆ ಪಡೆದ ಕಲಾ ತಪಸ್ವಿ ತಂಡವು ಇದೀಗ ಹೊಸ ಸ್ಪರ್ಧೆಯೊಂದಿಗೆ ತಮ್ಮಮುಂದೆ ನಿಂತಿದೆ.

ಕುಣಿಯುವ ಮನಸ್ಸುಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಕಳೆದ ಜನವರಿ ತಿಂಗಳಲ್ಲಿ ಗೆಜ್ಜೆನಾದ-2025 ಎನ್ನುವ ಹೆಸರಿನಲ್ಲಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಿ, ಯಶಸ್ವಿಯಾಗಿ ಸ್ಪರ್ಧೆಯನ್ನು ನಡೆಸಿ ಕಲಾಭಿಮಾನಿಗಳ ಮನವನ್ನು ತಂಡ ಗೆದ್ದಿತ್ತು. ಈಗ ಅದೇ ಯಶಸ್ಸಿನ ಮುಂದುವರಿದ ಭಾಗವಾಗಿ ನವೆಂಬರ್ 02ನೇ ಆದಿತ್ಯವಾರ.. ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಗೆಜ್ಜೆನಾದ-ಸೀಸನ್ 2 ಸ್ಪರ್ಧೆ ನಡೆಯಲಿದೆ.

ಗೆಜ್ಜೆನಾದ ಸ್ಪರ್ಧೆಯ ನಿಮಿತ್ತ ದಂಪತಿಗಳಿಗೋಸ್ಕರ ಆನ್ಲೈನ್ ಫೋಟೋ ಸ್ಪರ್ಧೆ “ರಾಜ -ರಾಣಿ 2025” ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನರೂಪದಲ್ಲಿ
ಪ್ರಥಮ Rs:-2,001 ಮತ್ತು ರಾಜ -ರಾಣಿ ಟ್ರೋಫಿ
ದ್ವಿತೀಯ Rs:-1,000 ಮತ್ತು ರಾಜ-ರಾಣಿ ಟ್ರೋಫಿ
ನೀಡಿ ಗೌರವಿಸಲಾಗುವುದು.

ಸ್ಪರ್ಧೆಯ ನಿಯಮಗಳು ಮತ್ತು ನಿಬಂಧನೆಗಳು

*ಪ್ರವೇಶ ಶುಲ್ಕ: ರೂ. 100.
*ಪೋಟೋ ಹೆಚ್.ಡಿ ಕ್ವಾಲಿಟಿಯಲ್ಲಿ ಕಳುಹಿಸಬೇಕು.
*ಪೋಟೋವನ್ನು 7090615880 ಈ ನಂಬ‌ರ್ಗೆಗೆ ವಾಟ್ಸ್ಆಪ್ ಮೂಲಕ ಕಳುಹಿಸತಕ್ಕದ್ದು.
*ಎಲ್ಲಾ ಪೋಟೋಗಳನ್ನು Gejjenaada 2.0 ಇನ್ಸಾಗ್ರಾನ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.
*ಪೋಟೋದೊಂದಿಗೆ ದಂಪತಿಗಳ ಹೆಸರು, ವಿಳಾಸ ಮತ್ತು ಪ್ರವೇಶ ಶುಲ್ಕ ಕಳುಹಿಸಿದ, Screenshotನ್ನು ಕಳುಹಿಸತಕ್ಕದ್ದು.
*ಲೈಕ್ ಪಡೆಯಲು ಕೊನೆಯ ದಿನಾಂಕ : 28-10-2025
*ವೀಕ್ಷಕರು ನೀಡಿದ ಲೈಕ್ಸ್ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಗುವುದು.
*ವಿಜೇತರ ಘೋಷಣೆ: 01/11/2025
*ಬಹುಮಾನ ವಿತರಣೆ: 02/11/2025
*ಪೋಟೋಗಳಲ್ಲಿ Fake ಲೈಕ್ಸ್ ಗಳು ಕಂಡು ಬಂದಲ್ಲಿ ಅವುಗಳನ್ನು ಪರಿಗಣಿಸಲಾಗುವುದಿಲ್ಲ.
*ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ.

ನೋಂದಾವಣೆಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜೈದೀಪ್ ಅಮೈ 7090615880

- Advertisement -

Related news

error: Content is protected !!