Monday, June 8, 2026
spot_imgspot_img
spot_imgspot_img

ಕಾರ್ಕಳ: ರೈಲಿನಿಂದ ಬಿದ್ದು ವ್ಯಕ್ತಿ ಗಂಭೀರ

- Advertisement -
- Advertisement -

ಕಾರ್ಕಳ : ರೈಲಿನಿಂದ ಹೊರ ಬಿದ್ದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ ಕೋಟೆಶ್ವರ- ಹಾಲಾಡಿ ನಡುವೆ ಹಾದು ಹೋಗಿರುವ ರೈಲು ಹಳಿಯಲ್ಲಿ ನಡೆದಿದೆ.

ಸಜ್ಜಿ ಪ್ರಳಯ (53) ಘಟನೆಯಲ್ಲಿ ಗಾಯಗೊಂಡವರು.

ಬೆಳಿಗ್ಗೆ 6.50 ರ ವೇಳೆಗೆ‌ ಸಂಚರಿಸಿದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಿಂದ ಜಾರಿ ಹೊರ ಬಿದ್ದಿದ್ದಾರೆ. ರೈಲ್ವೆ ಟ್ರ್ಯಾಕ್ ಸಿಬ್ಬಂದಿಗಳು 108 ಅಂಬುಲೆನ್ಸ್ ಗೆ ಕರೆ ಮಾಡಿದ್ದು, ಹಳಿಯಲ್ಲಿ‌ ಬಿದ್ದಿದ್ದ ಸಜ್ಜಿ ಪ್ರಳಯರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು‌ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!