Saturday, June 6, 2026
spot_imgspot_img
spot_imgspot_img

ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು..!

- Advertisement -
- Advertisement -

ರಾಯಚೂರು: ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ಕಾಲು ಜಾರಿ ಬಿದ್ದು ತಾಯಿ, ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಲಿಯಾಬಾದ್ ಗ್ರಾಮದ ನಿವಾಸಿ ತಾಯಿ ರಾಧಮ್ಮ (32) ಹಾಗೂ ಮಗ ಕೆ.ಸಂಜು (5) ಎಂದು ಗುರುತಿಸಲಾಗಿದೆ.

ಡಿ.9 ಬೆಳಿಗ್ಗೆ ತಾಯಿ ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದರು. ತಾಯಿಯ ಜೊತೆಗೆ ಸಂಜು ಜೊತೆಗೆ ಹೋಗಿದ್ದ. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದ ಸಂಜನನ್ನ ಕಾಪಾಡಲು ತಾಯಿ ನೀರಿಗಿಳಿದಿದ್ದಾರೆ. ಈ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಿಸಲು ಮುಂದಾಗಿದ್ದು, ಏನು ಪ್ರಯೋಜನವಾಗಿಲ್ಲ.ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!