Sunday, June 14, 2026
spot_imgspot_img
spot_imgspot_img

ವರದಕ್ಷಿಣೆ ಗಲಾಟೆ: ಮೈಸೂರಲ್ಲಿ ತಂಗಿಯ ಎದುರೇ ಅಣ್ಣನನ್ನು ಚುಚ್ಚಿ ಕೊಂದ ಪಾಪಿ ಗಂಡ

- Advertisement -
- Advertisement -

ಮೈಸೂರು: ವರದಕ್ಷಿಣೆ ಕಿರುಕುಳ ವಿಚಾರಕ್ಕೆ ಬಾಮೈದನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮೈಸೂರು ಕುವೆಂಪು ನಗರದ ಐ ಬ್ಲಾಕ್​ನಲ್ಲಿ ನಡೆದಿದೆ.

ಮೃತಪಟ್ಟ ಯುವಕ ಅಭಿಷೇಕ್(27) ಎಂದು ಗುರುತಿಸಲಾಗಿದೆ.

ಮೃತ ಅಭಿಷೇಕ್ ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ನಗರದ ಕುವೆಂಪು ಐ ಬ್ಲಾಕ್​ಗೆ ಹೋಗಿದ್ದ. ಇದೇ ವೇಳೆ ಅಭಿಷೇಕ್​ಗೆ, ಭಾವ ರವಿಚಂದ್ರ ಚಾಕುವಿನಿಂದ ಹಲ್ಲೆ ಮಾಡಿದ್ದು,ಇದರಿಂದ ತೀವ್ರವಾಗಿ ಗಾಯಗೊಂಡ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕೊಲೆ ಬಗ್ಗೆ ಅಭಿಷೇಕ್ ತಂಗಿ ವಿದ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲಾದರೂ ಹೋದರೆ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ಪ್ರತಿ ದಿನ ನನಗೆ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದೇ. ಆದರೆ ಈ ಬಗ್ಗೆ ಪೊಲೀಸರು ಕೂಡ ಏನು ಹೇಳಿಲ್ಲ. ಪೊಲೀಸರಿಗೆ ದುಡ್ಡು ಕೊಟ್ಟು ಸಮಾಧಾನ ಮಾಡುತ್ತಿದ್ದರು. ನನ್ನ ಕಾಪಾಡೋದಕ್ಕೆ ಬಂದ ಅಣ್ಣನನ್ನು ನನ್ನ ಮುಂದೆಯೇ ಕೊಲೆ ಮಾಡಿದ್ದಾರೆ. ನನ್ನ ಅಣ್ಣನನ್ನು ಕೊಲೆ ಮಾಡಿದ್ದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಕುಮಾರ್​​, ಮತ್ತೆ ರವಿಕುಮಾರ್​ ಇಬ್ಬರು ಕೊಲೆ ಮಾಡಿದ್ದಾರೆ. ನಮ್ಮ ಅಣ್ಣನ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

- Advertisement -

Related news

error: Content is protected !!