Friday, September 4, 2026
spot_imgspot_img
spot_imgspot_img

ಸಜೀಪ ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲು

- Advertisement -
- Advertisement -

ಶ್ರೀ ನಡಿಯೇಲು ದೈವಗಳ ನೂತನ ಸ್ವರ್ಣಬಿಂಬಗಳ ಪುನರ್‍ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ

ಸಜೀಪ ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲು,
ಶ್ರೀ ನಡಿಯೇಲು ದೈವಗಳ ನೂತನ ಸ್ವರ್ಣಬಿಂಬಗಳ ಪುನರ್‍ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ದಿನಾಂಕ ಮಾರ್ಚ್18 ಬುಧವಾರದಿಂದ ಮಾರ್ಚ್ 20ಶುಕ್ರವಾರದವರೆಗೆ ನಡೆಯಲಿದೆ.

ಮಾರ್ಚ್ 18 ಬುಧವಾರ ಸಾಯಂಕಾಲ ಗಂಟೆ 4ಕ್ಕೆ ಮಾರ್ನಬೈಲು ಜಂಕ್ಷನ್ ನಿಂದ ಶ್ರೀ ಕ್ಷೇತ್ರ ಮಿತ್ತಮಜಲಿಗೆ ದೈವಗಳ ನೂತನ ಸ್ವರ್ಣಬಿಂಬಗಳ ಜೊತೆಗೆ ಹೊರಕಾಣಿಕೆಯ ಶೋಭಾಯಾತ್ರೆ ಪ್ರಾರಂಭ. ಸಾಯಂಕಾಲ 5ಕ್ಕೆ ಮಿತ್ತಮಜಲು ದ್ವಾರದಲ್ಲಿ ನೀಲೇಶ್ವರ ತಂತ್ರಿಗಳಿಗೆ ಸ್ವಾಗತ ಹಾಗೂ ಶ್ರಿ ಕ್ಷೇತ್ರ ಮಿತ್ತಮಜಲಿಗೆ ಶೋಭಾಯಾತ್ರೆಯ ಮುಂದುವರಿಕೆ. ಸಾಯಂಕಾಲ 5.30ಕ್ಕೆ ಲಘು ಉಪಹಾರ , ಸಾಯಂಕಾಲ 6ಕ್ಕೆ ವೈದಿಕ ಕಾರ್ಯಕ್ರಮಗಳ ಪ್ರಾರಂಭ(ಪ್ರಾರ್ಥನೆ, ಬಿಂಬ ಪರಿಗ್ರಹ, ಬಿಂಬ ಜಲಾಧಿವಾಸ, ಪುಣ್ಯಾಹ ಪ್ರಾಸಾದ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ) ಸಾಯಂಕಾಲ 6.15ಕ್ಕೆ ವಿಠಲ ನಾಯಕ್ ಕಲ್ಲಡ್ಕ ತಂಡದವರಿಂದ “ಗೀತಾ ಸಾಹಿತ್ಯ ಸಂಭ್ರಮ “.

ಸಂಜೆ ಗಂಟೆ 7.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ, ಆಶೀರ್ವಚನ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶ್ರೀ ರಾಮಕ್ಷೇತ್ರ ಕನ್ಯಾಡಿ, ಕಾರ್ಯಕ್ರಮದ ಅತಿಥಿಗಳು ಬ್ರಿಜೇಶ್ ಚೌಟ ಮಾನ್ಯ ಲೋಕಸಭಾ ಸದಸ್ಯರು, ದ.ಕ, .ಬಿ ರಮಾನಾಥ ರೈ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಮಂಜುನಾಥ ಭಂಡಾರಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರ್ಕಾರ, ಉಪಸ್ಥಿತಿ: ಬರಂಗರೆ ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯಕ್ ಗಡಿ ಪ್ರಧಾನರು ಕಾಂತಾಡಿಗುತ್ತು, ಸಂಕಪ್ಪ ಶೆಟ್ಟಿ ಪಾಲಮಂಟಮೆ, ಎಂ ಸುಬ್ರಮಣ್ಯ ಭಟ್ ಮಾಗಣೆ ತಂತ್ರಿಗಳು, ಶಿವರಾಮ ಭಂಡಾರಿ ಬಿಜಂದಾರುಗುತ್ತು, ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ ಗಡಿ ಪ್ರಧಾನರು ಸಜೀಪಗುತ್ತು, ನಾರ್ಣ ಆಳ್ವ ಯಾನೆ ಶಶಿಧರ ರೈ ಗಡಿಪ್ರಧಾನರು ಮಾಡಂತಾಡಿಗುತ್ತು, ಜಯರಾಮ ಶೆಟ್ಟಿ ನಗ್ರಿಗುತ್ತು, ಗೌರವರ್ಪಣೆ: ದಿವಾಕರ ಮುಗುಳಿಯ ಕಾರ್ಯನಿರ್ವಹಣಾಧಿಕಾರಿ, ಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಪಣೋಲಿಬೈಲು, ಸಿದ್ದಾರ್ಥ್ ಪ್ರಭು ಶ್ರೀ ದಾಮೋದರ ಜ್ಯುವೆಲರ್ಸ್ ಗುರುಪುರ ಕೈಕಂಬ, ರಾತ್ರಿ ಗಂಟೆ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ

ಮಾರ್ಚ್ 19ರಂದು ಗುರುವಾರ ಬೆಳಿಗ್ಗೆ 7:00ರಿಂದ ಗಣಪತಿ ಹೋಮ, ಬಿಂಬ ಶುದ್ದಿ ಕಲಶಾಭಿಷೇಕ, ಶಾಂತಿ ಹೋಮ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಮಧ್ಯಾಹ್ನ 12:30ರಿಂದ : ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ಸಂಜೆ 5.30ಕ್ಕೆ : ಸಾಂಸ್ಕೃತಿಕ ಕಾರ್ಯಕ್ರಮಅನನ್ಯ ಪ್ರಕಾಶ್ ಬೆಂಗಳೂರು, ಪಲ್ಲವಿ ಪ್ರಭು, ಸಂದೇಶ್ ನೀರುಮಾರ್ಗ, ವೈ.ಎನ್. ರವೀಂದ್ರ ಹಾಗೂ ತಂಡದವರಿಂದ ಸಂಗೀತ ಸುಧಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಮಾರ್ಗದರ್ಶಕರು: ಶ್ರೀ ಮೋಹನ್ ಆಳ್ವ ಅಧ್ಯಕ್ಷರು ಆಳ್ವಾಸ್ ವಿದ್ಯಾ ಸಂಸ್ಥೆಗಳು ಮೂಡಬಿದ್ರೆ.ರಾತ್ರಿ 7ರಿಂದ: ಕುಂಭೇಷ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಧ್ಯಾನಾಧಿವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ಸಂಜೆ ನಡೆಯಲಿದೆ.

ಸಂಜೆ ಗಂಟೆ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಆಶೀರ್ವಚನ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಕ್ಷೇತ್ರ ಒಡಿಯೂರು ಹಾಗೂ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲ ನೀಡಲಿದ್ದಾರೆ. ಅತಿಥಿಗಳಾಗಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಾಸಕರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ನಳಿನ್ ಕುಮಾರ್ ಕಟೀಲ್ ಮಾಜಿ ಲೋಕಸಭಾ ಸದಸ್ಯರು ದ.ಕ, ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಕರ್ನಾಟಕ ಸರಕಾರ ಭಾಗವಹಿಸಲಿದ್ದಾರೆ. ಉಪಸ್ಥಿತಿಯಲ್ಲಿ ಬರಂಗರೆ ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯ್ಕ್, ಎಂ. ಸುಬ್ರಹ್ಮಣ್ಯಭಟ್ ಮಾಗಣೆ ತಂತ್ರಿಗಳು, ಶ್ರೀ ಸಂಕಪ್ಪ ಶೆಟ್ಟಿ ಪಾಲಮಂಟಮೆ, ಶಿವರಾಮ ಭಂಡಾರಿ ಬಿಜಂದಾರುಗುತ್ತು, ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ ಗಡಿ ಪ್ರಧಾನರು ಸಜೀಪಗುತ್ತು, ನಾರ್ಣ ಆಳ್ವ ಯಾನೆ ಶಶಿಧರ ರೈ ಗಡಿಪ್ರಧಾನರು ಮಾಡಂತಾಡಿಗುತ್ತು, ಜಯರಾಮ ಶೆಟ್ಟಿ ನಗ್ರಿಗುತ್ತು ಉಪಸ್ಥಿತರಿರುವರು. ಗೌರವಾರ್ಪಣೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರಿಗೆ. ರಾತ್ರಿ ಗಂಟೆ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಮಾರ್ಚ್ 18 ಬುಧವಾರದಂದು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.

- Advertisement -

Related news

error: Content is protected !!