Sunday, June 14, 2026
spot_imgspot_img
spot_imgspot_img

ತೆರೆಯ ಮೇಲೆ ಬರಲಿದ್ದಾನೆ ದಿ ರಿಯಲ್ ‘ ಮೇಜರ್

- Advertisement -
- Advertisement -

ಬೆಂಗಳೂರು: 26 ನವೆಂಬರ್ 2008ರಲ್ಲಿ ಮುಂಬೈ ತಾಜ್ ಹೋಟೆಲ್‍ನಲ್ಲಿ ಸಿಲುಕಿದವರನ್ನು ಕಾಪಾಡಲು ಹೋಗಿ ಉಗ್ರರ ಗುಂಡಿಗೆ ತನ್ನ ಪ್ರಾಣವನ್ನೇ ಬಲಿ ನೀಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕಥೆ ತೆಲುಗಿನಲ್ಲಿ ಸಿನಿಮಾವಾಗಿ ತಯಾರಾಗುತ್ತಿದೆ. ಸಂದೀಪ್ ಉನ್ನಿಕೃಷ್ಣನ್ ಕೇರಳಕ್ಕೆ ಸೇರಿದವರಾದರೂ, ಅವರು ಬೆಳೆದದ್ದು ಹಾಗೂ ನೆಲೆಸಿದ್ದು ಬೆಂಗಳೂರಿನಲ್ಲಿ. ಈಗ ಅದು ತೆಲುಗಿನಲ್ಲಿ ‘ಮೇಜರ್’ ಹೆಸರಿನಲ್ಲಿ ತಯಾರಾಗುತ್ತಿದೆ.

ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕೆಲವು ಅಂಶಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಟ ಮಹೇಶ್ ಬಾಬು ‘ಮೇಜರ್’ ಸಿನಿಮಾ ನಿರ್ಮಿಸಿದ್ದಾರೆ. ಅದರಲ್ಲಿ ಹೀರೋ ಆಗಿ ಕ್ಷಣಂ, ಗೂಡಚಾರಿ, ಎವರು, ಖ್ಯಾತಿಯ ಅಡಿವಿ ಶೇಷ್ ನಟಿಸಿದ್ದಾರೆ. ಸದ್ಯ ‘ಮೇಜರ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

- Advertisement -

Related news

error: Content is protected !!