Monday, August 10, 2026
spot_imgspot_img
spot_imgspot_img

ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಶಿಕ್ಷಕಿ ಸಾವು..!

- Advertisement -
- Advertisement -

ಕಲಬುರಗಿ: ಮನೆಯ ಮೇಲ್ಛಾವಣಿ ಕುಸಿದು ಶಿಕ್ಷಕಿಯೋರ್ವರು ಸಾವನ್ನಪ್ಪಿದ ಘಟನೆ ಕಲಬುರಗಿ ‌ಕಮಲಾಪುರ ತಾಲೂಕಿನ ‌ಮಹಾಗಾಂವ ಕ್ರಾಸ್ ಬಳಿ ನಡೆದಿದೆ.

ಮೃತಪಟ್ಟ ಶಿಕ್ಷಕಿ ಅನಿತಾ ಮಠಪತಿ (35) ಎಂದುಗುರುರಿಸಲಾಗಿದೆ.

ಮೃತ ಅನಿತಾ ಮಠಪತಿ ಅವರು ಸಿದ್ದಭಾರತಿ ವಿದ್ಯಾಮಂದಿರದಲ್ಲಿ ಶಿಕ್ಷಕಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಮನೆಯ ಮುಂದೆ ಕುಳಿತುಕೊಂಡಿದ್ದರು. ಬಳಿಕ ಮಗನಿಗೆ ಮೊಬೈಲ್ ತೆಗೆದುಕೊಂಡು ಬಾ ಅಂತ ಹೇಳಿದ ಕೂಡಲೇ ಏಕಾಏಕಿ ಮನೆಯ ಮೇಲ್ಛಾವಣಿ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಪುತ್ರ ಬಚಾವ್ ಆಗಿದ್ದು ಶಿಕ್ಷಕಿ ಅನಿತಾ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!