Sunday, April 28, 2024
spot_imgspot_img
spot_imgspot_img

‘ಕದ್ರಿ ಪಾರ್ಕ್ ಡ್ ಪರ್ಬದ ಮೇಳ’ದ ಮೆರುಗನ್ನು ಹೆಚ್ಚಿಸಿದ ಸೆಲ್ಫೀ ಗ್ಯಾಲರಿ..!

- Advertisement -G L Acharya panikkar
- Advertisement -

ಕರೋಕೆ ಗಾಯನ ಸ್ಪರ್ಧೆಯಲ್ಲಿ ವಿನ್ನರ್ಸ್ & ರನ್ನರ್ಸ್ ಆಗಿ ಮಿಂಚಿದವರ‍್ಯಾರು…?ಶಾಂತದುರ್ಗಾ ಸ್ವಸಹಾಯ ಸಂಘ ಮಂಗಳಾದೇವಿ ಮಂಗಳೂರು ವತಿಯಿಂದ ನವೆಂಬರ್ 3 ರಿಂದ 5 ರವರೆಗೆ ಕದ್ರಿ ಪಾರ್ಕ್ನಲ್ಲಿ ನಡೆಯುತ್ತಿರುವ ‘ಕದ್ರಿ ಪಾರ್ಕ್ ಡ್ ಪರ್ಬದ ಮೇಳ’ ಸಂಭ್ರಮದಲ್ಲಿ ಕರೋಕೆ ಗಾಯನ ಸ್ಪರ್ಧೆಯು ಬಹಳ ಯಶಸ್ವಿಯಾಗಿ ನಡೆಯಿತು.

ಜ್ಯೂನಿಯರ್ (1 ರಿಂದ 5) ವಿಭಾಗ ಹಾಗೂ ಸೀನಿಯರ್ (6 ರಿಂದ 10) ಹೀಗೆ ಎರಡು ವಿಭಾಗಗಳಲ್ಲಿ ನಡೆಸಿದ ಈ ಸ್ಪರ್ಧೆಯಲ್ಲಿ ಸುಮಾರು 50 ಕ್ಕಿಂತಲೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿ ತಮ್ಮ ವಿವಿಧ ಶೈಲಿಯ ಹಾಡುಗಳ ಮೂಲಕ ರಂಜಿಸಿದರು.

ಜ್ಯೂನಿಯರ್ ವಿಭಾಗದ ಕರೋಕೆ ಗಾಯನ ಸ್ಪರ್ಧೆಯಲ್ಲಿ ವೃಷ್ಟಿ ವಿ.ಕೆ ಮಂಗಳೂರು ಪ್ರಥಮ ಸ್ಥಾನ ಹಾಗೂ ಅಶ್ಮಿತ್ ಎ.ಜೆ ಮಂಗಳೂರು ಹಾಗೂ ಸಮನ್ವಿ ರಮೇಶ್ ಗೇರುಕಟ್ಟೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸೀನಿಯರ್ ವಿಭಾಗದಲ್ಲಿ ಮೃಣಾಲ್ ಡಿ ಭಟ್ ಪ್ರಥಮ ಸ್ಥಾನ ಹಾಗೂ ರಾಶಿ ಯು ಶೆಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಕರೋಕೆ ಗಾಯನ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಗಾಯಕ ಚಂದ್ರಶೇಖರ ಮಂಗಳೂರು ಹಾಗೂ ಖ್ಯಾತ ಹಿನ್ನಲೆ ಗಾಯಕಿ ಗಾಯತ್ರಿ ಪ್ರಕಾಶ್‌ರವರು ತೀರ್ಪುಗಾರರಾಗಿ ಸಹಕರಿಸಿದರು

ನ.5 ರ ತನಕ ರಾತ್ರಿ 9.30 ಗಂಟೆಯ ವರೆಗೆ ನಡೆಯುವ ಈ ಮೇಳದಲ್ಲಿ ಸೆಲ್ಫೀ ಗ್ಯಾಲರಿಯು ವಿಶೇಷ ಆಕರ್ಷಣೆಯನ್ನು ಹೊಂದಿದೆ.

ಇಂದು ಸಂಜೆ 5 ಗಂಟೆಗೆ ಕಲಾ ತಪಸ್ವಿ ಸಾಂಸ್ಕೃತಿಕ ತಂಡದವರಿಂದ ಜೈದೀಪ್ ಅಮೈ ನಿರ್ದೇಶನ-ನಿರೂಪಣೆಯೊಂದಿಗೆ ಹಾಡು ನೃತ್ಯ, ಜಾದು, ತಬಲಾ, ಕೊಳಲು ವಾದನ, ಪ್ರಹಸನ, ಮನೋರಂಜನೆಗಾಗಿ ಆಟಗಳು, ಹಾಗೂ ಇನ್ನಿತರ ಸಾಂಸ್ಕೃತಿಕ ಕಲಾ ಪ್ರದರ್ಶನಗಳನ್ನೊಳಗೊಂಡ ಅಮೋಘ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕರಾವಳಿಯ ಖ್ಯಾತ ಹಾಡುಗಾರ-ನಿರೂಪಕ ರಕ್ಷಣ್ ಮಡೂರು ಹಾಗೂ ಪ್ರಖ್ಯಾತ ನೃತ್ಯ ಕಲಾವಿದ ನಿಶಾಂತ್ ಶೆಟ್ಟಿಯವರು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!