Saturday, June 13, 2026
spot_imgspot_img
spot_imgspot_img

ಶಿಕ್ಷಕಿ ನಾಪತ್ತೆ..!

- Advertisement -
- Advertisement -

ಶಾಲೆಯ ಶಿಕ್ಷಕಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಾಮನಹಳ್ಳಿಯಿಂದ ಬಣಕಲ್ ನಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಶಿಕ್ಷಕಿ ಆಸಿಯಾ ಎಂದು ಗುರುತಿಸಲಾಗಿದೆ.

ಶಿಕ್ಷಕಿ ಶಾಲೆಗೆ ಹೋಗಿ ಬುಧವಾರ ರಜೆ ಹಾಕಿ ಮನೆಗೆ ಹೋಗುತ್ತೇನೆಂದು ತೆರಳಿದವರು ನಾಪತ್ತೆಯಾಗಿದ್ದಾರೆ. ಮನೆಗೆ ಹೋಗಬೇಕು ಎಂದು ಮುಖ್ಯ ಶಿಕ್ಷಕರಲ್ಲಿ ರಜೆ ಕೇಳಿ ಮನೆಗೆ ಹೋಗಿದ್ದರು. ಆದರೆ ಆಸಿಯಾ ಮನೆಗೆ ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದಾರೆ. ಇನ್ನು ಬಣಕಲ್ ಶಾಲೆಯ ಶಿಕ್ಷಕಿ ಆಸಿಯಾ ಸಂಜೆ 5 ಗಂಟೆಯ ಸಮಯದಲ್ಲಿ ಪತಿಗೆ ಸಂದೇಶವನ್ನು ಕಳಿಸಿದ್ದಾರೆ. ಸಂದೇಶದಲ್ಲಿ ಯಾವುದಾದರೂ ಹೊಳೆಗೆ ಹಾರಿ ಸಾಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಈ ನಂಬರ್ ಗೆ ಸಂಪರ್ಕಿಸಿ: 7619252263 / 9742473669(ವರದಿ- ತನು ಕೊಟ್ಟಿಗೆಹಾರ.

- Advertisement -

Related news

error: Content is protected !!