Saturday, June 28, 2025
spot_imgspot_img
spot_imgspot_img

ಚಾಕುವಿನಿಂದ ಇರಿದು ಯುವಕನ ಕೊಲೆಗೈದ ದುಷ್ಕರ್ಮಿಗಳು..!

- Advertisement -
- Advertisement -

ದಾವಣಗೆರೆ: ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿರುವ ಘಟನೆ ದಾವಣಗೆರೆ ತಾಲೂಕಿನ ಒಬಜ್ಜಿಹಳ್ಳಿಯ ಹೊರ ವಲಯದಲ್ಲಿ ನಡೆದಿದೆ.

ಕೊಲೆಯಾದ ಯುವಕ ಸುದೀಪ್ (25) ಎಂದು ಗುರುತಿಸಲಾಗದೆ.

ದಾವಣಗೆರೆ ನಗರದ ಬೂದಾಳ್ ರಸ್ತೆಯ ನಿವಾಸಿ ಸುದೀಪ್‌ನನ್ನು ಕಳೆದ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾಗಿರುವ ಸುದೀಪ್‌ ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಸಿಪಿಐ ಕಿರಣ್ ಕುಮಾರ್, ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ರಾತ್ರಿ ವೇಳೆ ಗಲಾಟೆಯಾಗಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೊಲೆ ಕೇಸ್‌ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!