- Advertisement -
- Advertisement -
ತಂದೆ ಮರ ಕಡಿಯುವಾಗ ಮರ ಬಿದ್ದು ಮಗನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಡು ಎಸ್ಟೇಟಿನಲ್ಲಿ ನಡೆದಿದೆ.
ಮೃತರನ್ನು ಅಬ್ದುಲ್ ಅಜೀಜ್ (20)ಎಂದು ಗುರುತಿಸಲಾಗಿದೆ.
ಕೇರಳದಿಂದ ಮರ ಕಡಿಯಲು ತಂದೆ-ಮಗ ಮೂಡಿಗೆರೆಗೆ ಬಂದಿದ್ದರು ಎನ್ನಲಾಗಿದೆ. ಅಪ್ಪ ಮರ ಕತ್ತರಿಸುತ್ತಿದ್ದು, ಮಗ ಕೆಳಗೆ ನಿಂತಿದ್ದ. ಈ ವೇಳೆ ಕತ್ತರಿಸಿದ ಮರ ಆಕಸ್ಮಿಕವಾಗಿ ಅಬ್ದುಲ್ ಅಜೀಜ್ ಮೇಲೆ ಬಿದ್ದಿದೆ. ಪರಿಣಾಮ ಅಬ್ದುಲ್ ಅಜೀಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮೂಡಿಗೆರೆಯ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -