Thursday, May 2, 2024
spot_imgspot_img
spot_imgspot_img

ಹಲ್ಲಿನ ರಕ್ಷಣೆಗೆ ಹಲವು ಸೂತ್ರಗಳು:

- Advertisement -G L Acharya panikkar
- Advertisement -

ನಿಮ್ಮ ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜುವುದು ಏಕೈಕ ಸೂತ್ರವಲ್ಲ. ಬಿಳಿಯ ಮುತ್ತಿನಂತಹ ಹಲ್ಲುಗಳನ್ನು ಹೊಂದಿರಲು ಕೇವಲ ಬ್ರಷ್ ಮಾಡುವುದು ಸಾಲದು. ಹಲ್ಲುಗಳು ಇನ್ನೂ ಹಲವಾರು ಅಗತ್ಯಗಳನ್ನು ಬೇಡುತ್ತವೆ. ಸುಂದರ ಮುಗುಳಗು ಸದಾ ನಿಮ್ಮದಾಗಿರಬೇಕೆಂದರೆ ನೀವು ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಇಂದಿನ ಗಡಿಬಿಡಿಯ ಯುಗದಿಂದಾಗಿ ನಾವು ಬಹಳಷ್ಟು ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುವಂತಾಗಿದೆ. ಇದು ನಮ್ಮ ಹಲ್ಲುಗಳ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಿದೆ ಎನ್ನಬಹುದು. ಕೆಲವರು ಸಮಯದ ಅಭಾವದಿಂದ ಕಾಟಾಚಾರಕ್ಕೆ ಹಲ್ಲುಜ್ಜುವ ಶಾಸ್ತ್ರವನ್ನು ಮಾಡುತ್ತಾರೆ. ಹಲ್ಲುಗಳನ್ನು ಸರಿಯಾಗಿ ಉಜ್ಜಲು ಸ್ವಲ್ಪ ಹೆಚ್ಚಿನ ಸಮಯವನ್ನು ವ್ಯಯಿಸಲೇಬೇಕು. ಸರಿಯಾದ ರೀತಿಯಲ್ಲಿಯೇ ಹಲ್ಲುಗಳನ್ನು ಉಜ್ಜಬೇಕು. ಹೆಚ್ಚಿನವರು ಎದುರಿನ ಹಲ್ಲುಗಳನ್ನಷ್ಟೇ ಉಜ್ಜುತ್ತಾರೆ,ಆದರೆ ಇಡೀ ಬಾಯಿಯನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಹಲ್ಲುಗಳನ್ನೂ ಸರಿಯಾಗಿ ಉಜ್ಜಿಕೊಂಡು ಬಳಿಕ ಫ್ಲಾಸಿಂಗ್ ಮಾಡಿ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ದಂತ ಚೂರ್ಣಗಳು ಫ್ಲೋರೈಡ್‌ನಿಂದ ಕೂಡಿದ್ದು ಹುಳುಕಾಗದಂತೆ ಹಲ್ಲನ್ನು ಕಾಪಾಡುತ್ತದೆ.
ಪದೇ ಪದೇ ಬ್ರಶ್ ಹಾಗೂ ಪೇಸ್ಟ್ ಬದಲಾಯಿಸಬೇಡಿ. ಇದರಿಂದ ಬಾಯಿಯಲ್ಲಿ ಹುಣ್ಣು, ಅಲರ್ಜಿ, ತುರಿಕೆ ಬರಬಹುದು. ಬ್ರಾಂಡ್ ಅಥವಾ ಕಂಪೆನಿ ಬದಲಾಯಿಸುವಾಗ ದಂತ ವೈದ್ಯರ ಸಲಹೆ ಪಡೆಯಿರಿ. ಹಲ್ಲು ಬೆಳ್ಳಗಾಗಿಸುವ ಯಾವುದೇ ರಾಸಾಯನಿಕಗಳನ್ನು ದಯವಿಟ್ಟು ದಂತ ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬೇಡಿ.

ನಿಮ್ಮ ವಸಡುಗಳನ್ನು ಬ್ರಶ್ ಆದ ಬಳಿಕ ಬೆರಳಿನಿಂದ ಗಟ್ಟಿಯಾಗಿ ತಿಕ್ಕಿ ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷ ವಸಡನ್ನು ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ಮತ್ತು ವಸಡಿನ ಆರೋಗ್ಯವನ್ನು ವೃದ್ಧಿಸುತ್ತವೆ. ಊಟದ ಮಧ್ಯೆ ಸಿಹಿ ಪದಾರ್ಥ ಅಂಟಾದ ಪದಾರ್ಥ (ಚಾಕೊಲೇಟ್) ಇತ್ಯಾದಿಗಳನ್ನು ಸೇವಿಸಬೇಡಿ. ಅನಿವಾರ್ಯವಾದಲ್ಲಿ ತಿಂದ ಬಳಿಕ ಚೆನ್ನಾಗಿ ಹಲ್ಲು ಉಜ್ಜಬೇಕು. ಬಾಯಿಯನ್ನು ಪ್ರತಿ ಸಲ ಆಹಾರ ತಿಂದ ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚನೆಯ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸುವುದು ಸೂಕ್ತ.

ಹೆಚ್ಚಿನ ಧೂಮಪಾನಿಗಳು ವಾಸನೆಯನ್ನು ಮುಚ್ಚಿಡಲು ಮಿಂಟ್ ಅಥವಾ ಮೌತ್ ಫ್ರೆಷರ್‌ಗಳನ್ನು ಬಳಸುತ್ತಾರೆ. ಆದರೆ ಧೂಮಪಾನ ಮಾಡುವುದನ್ನು ದಂತವೈದ್ಯರು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಧೂಮಪಾನ ಶ್ವಾಸಕೋಶಗಳಿಗೆ ಮಾತ್ರ ಹಾನಿಯನ್ನುಂಟು ಮಾಡುವುದಿಲ್ಲ,ಅದು ಹಲ್ಲುಗಳನ್ನೂ ಕೆಡಿಸುತ್ತದೆ. ಅದು ಹಲವಾರು ದಂತ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ಹಲ್ಲುಗಳ ಮೇಲೆ ಹಳದಿ ಕಲೆಗಳು,ದಂತಕ್ಷಯ,ವಸಡು ರೋಗಗಳು,ಅಷ್ಟೇ ಏಕೆ…ಬಾಯಿ ಕ್ಯಾನ್ಸರ್‌ಗೂ ಅದು ಕಾರಣವಾಗುತ್ತದೆ. ಯಾವುದೇ ದಂತರೋಗಗಳನ್ನು ತಡೆಯಲು ಧೂಮಪಾನದ ದುರಭ್ಯಾಸವನ್ನು ತಕ್ಷಣ ವರ್ಜಿಸುವುದು ಅತ್ಯಗತ್ಯ.

ಆರೋಗ್ಯವಂತ ಹಲ್ಲುಗಳು, ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ನಾವು ನಮ್ಮ ಬಾಯಿಯ ಸ್ವಚ್ಛತೆ, ಹಲ್ಲುಗಳ ಭದ್ರತೆ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡದಿದ್ದಲ್ಲಿ ಹತ್ತು ಹಲವಾರು ರೋಗಗಳಿಗೆ ರಹದಾರಿಯಾಗಬಲ್ಲುದು. ನಾವು ತಿನ್ನುವ ಆಹಾರದ ಪಚನಕ್ಕೆ ಮತ್ತು ಜೀರ್ಣ ಕ್ರಿಯೆಗಳಿಗೆ ಆರೋಗ್ಯ ಪೂರ್ಣ ಹಲ್ಲುಗಳು ಅತೀ ಅವಶ್ಯಕ. ಇಲ್ಲವಾದಲ್ಲಿ ಒಂದಕ್ಕೊಂದು ಸಮಸ್ಯೆಗಳು ಕೂಡಿಕೊಂಡು ವ್ಯಕ್ತಿಯು ರೋಗರುಜಿನಗಳ ಹಂದರವಾಗಬಹುದು. ಅಪೂರ್ಣ ಜೀರ್ಣ ಕ್ರಿಯೆಯಿಂದ ರಕ್ತಹೀನತೆ ಬರಬಹುದು. ರಕ್ತಹೀನತೆಯಿಂದ ಇನ್ಯಾವುದೋ ರೋಗಕ್ಕೆ ಮೂಲವಾಗಬಹುದು. ಅದೇ ರೀತಿ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವಸಡು ರೋಗಗಳು ಹುಟ್ಟಿಕೊಳ್ಳಬಹುದು.

- Advertisement -

Related news

error: Content is protected !!