Thursday, June 18, 2026
spot_imgspot_img
spot_imgspot_img

ಎಟಿಎಂ ಮೆಷಿನ್‌ ಎಗರಿಸಿದ ಕಳ್ಳರು..!

- Advertisement -
- Advertisement -

ಹಾಸನ: ಇಂಡಿಯಾ ಒನ್ ಎಟಿಎಂ ಮೆಷಿನನ್ನೇ ಕಳ್ಳರು ಹೊತ್ತೊಯ್ದ ಘಟನೆ ನಗರ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ನಡೆದಿದೆ.

ರಾಜ್ಯ ಹೆದ್ದಾರಿ ಬದಿಯಲ್ಲೇ ಇರುವ ಎಟಿಎಂ ಮೆಷಿನ್ ಕಾಣೆಯಾಗಿರುವುದು ಬೆಳಗ್ಗೆ ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಕಳ್ಳರು ಎಟಿಎಂ ಮೆಷಿನ್ ಹೊತ್ತೊಯ್ದಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಟಿಎಂ ಮಷೀನ್ ನಲ್ಲಿ ಸುಮಾರು ಒಂದು ಲಕ್ಷ ರೂ. ಹಣ ಮಾತ್ರವೇ ಇತ್ತು ಎನ್ನಲಾಗುತ್ತಿದ್ದು, ಇನ್ನೂ ಖಚಿತ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!