Saturday, May 4, 2024
spot_imgspot_img
spot_imgspot_img

ಚಳಿಗಾಲದಲ್ಲಿ ತುಪ್ಪ ತಿನ್ನಬೇಕು ಎನ್ನುವುದು ಇದಕ್ಕೆ!

- Advertisement -G L Acharya panikkar
- Advertisement -

ಚಳಿಗಾಲದಲ್ಲಿ ಒಂದರ ಮೇಲೊಂದು ಬಟ್ಟೆ ಹಾಕಿಕೊಳ್ಳುವ ಜೊತೆಗೆ ತುಪ್ಪ ಕೂಡ ತಿನ್ನುವುದರಿಂದ ಬೆಚ್ಚಗಿರಬಹುದು ಮತ್ತು ಆರೋಗ್ಯಕರವಾಗಿ ಕೂಡ ಇರಬಹುದು.ಚಳಿಗಾಲದ ಈ ಸಂದರ್ಭದಲ್ಲಿ ನಮ್ಮನ್ನು ನಾವು ಬೆಚ್ಚಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಏಕೆಂದರೆ ಈ ಸಂದರ್ಭದಲ್ಲಿ ನಮ್ಮ ದೇಹದ ತಾಪಮಾನ ಹೊರಗಿನ ತಾಪ ಮಾನಕ್ಕೆ ತಕ್ಕಂತೆ ಕುಸಿತ ಕಾಣುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಶುರುವಾಗುವುದರ ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿ ಕೂಡ ಮೊದಲಿ ನಂತೆ ಇರಲು ಸಾಧ್ಯವಿರುವುದಿಲ್ಲ.

ಹೀಗಾಗಿ ನಾವು ನಮ್ಮ ಆರೋಗ್ಯದ ರಕ್ಷಣೆಗೆ ಒಂದಿಲ್ಲೊಂದು ಪ್ರಯತ್ನ ಮಾಡಲೇಬೇಕು. ತುಪ್ಪದ ಬಳಕೆ ಇದರಲ್ಲೊಂದು. ಅಪ್ಪಟ ಹಸುವಿನ ತುಪ್ಪಕ್ಕೆ ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡುವ ಸಮರ್ಥ್ಯವಿದೆ.

ತುಪ್ಪ ನಿಮ್ಮ ದೇಹದ ತಾಪಮಾನವನ್ನು ಚಳಿಗಾಲದಲ್ಲಿ ಬೆಚ್ಚಗೆ ಇರು ವಂತೆ ಕಾಪಾಡುತ್ತದೆ. ಚಳಿಗಾಲದಲ್ಲಿ ಅಡುಗೆ ಮಾಡಲು ಕೂಡ ತುಪ್ಪ ವನ್ನು ಇದೇ ಕಾರಣಕ್ಕೆ ಬಳಸಲಾಗುತ್ತದೆ. ನೀವು ತಿನ್ನುವ ರೊಟ್ಟಿ, ಚಪಾತಿ, ಸಬ್ಜಿ ಇವುಗಳಲ್ಲಿ ತುಪ್ಪವನ್ನು ಬಳಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಖ್ಯವಾಗಿ ಮಕ್ಕಳಿಗೆ ಚಳಿಗಾಲದಲ್ಲಿ ತುಪ್ಪ ಕೊಡಿ.

ಪೌಷ್ಟಿಕಾಂಶಗಳನ್ನು ಅಪಾರವಾಗಿ ಒಳಗೊಂಡಿರುವ ತುಪ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನೆರವಾಗುತ್ತದೆ.
ಅಂದ್ರೆ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣ ವಾಗುವಂತೆ ಮಾಡುತ್ತದೆ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ತುಪ್ಪ ವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಚಳಿಗಾಲದಲ್ಲಿ ಬಳಸುವುದರಿಂದ ನಿಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ಕರುಳು ಕೂಡ ಉತ್ತಮ ವಾಗಿ ಚಲನೆ ಆಗುತ್ತದೆ.​

ಆಂಟಿ ಇಂಫ್ಲಾಮೇಟರಿ ಗುಣಲಕ್ಷಣಗಳನ್ನು ಮತ್ತು ಆಂಟಿ ಬ್ಯಾಕ್ಟೀರಿ ಯಲ್ ಲಕ್ಷಣಗಳನ್ನು ಅಪಾರವಾಗಿ ಒಳಗೊಂಡಿರುವ ತುಪ್ಪ ನಿಮ್ಮ ನೆಗಡಿ ಹಾಗೂ ಕೆಮ್ಮಿನ ಸಮಸ್ಯೆಗೆ ಚಳಿಗಾಲದಲ್ಲಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಸಂದರ್ಭದಲ್ಲಿ ಮೂಗಿನ ಹೊಳ್ಳೆ ಗಳಿಗೆ ಉಗುರು ಬೆಚ್ಚಗಿನ ಒಂದೆರಡು ಹನಿ ತುಪ್ಪ ಹಾಕಿಕೊಂಡು ಮಲ ಗಿದರೆ ಬಹಳ ಬೇಗನೆ ಪರಿಹಾರ ಸಿಗುತ್ತದೆ.

ತುಪ್ಪ ಒಂದು ನೈಸರ್ಗಿಕ ಮಾಯಿಶ್ಚರೈಸರ್ ಆಗಿರುವುದರಿಂದ ನಿಮ್ಮ ತ್ವಚೆಯನ್ನು ಒಳಗಿನಿಂದ ತೇವಾಂಶ ಕೂಡಿರುವಂತೆ ಮಾಡುತ್ತದೆ.
ನಿಮ್ಮ ತ್ವಚೆ ಹೆಚ್ಚು ಮೃದು ಮತ್ತು ಕೋಮಲವಾಗುವುದು ಮಾತ್ರ ವಲ್ಲದೆ ಚರ್ಮದ ಸಮಸ್ಯೆಗಳಿಂದ ಮುಕ್ತವಾಗುತ್ತದೆ. ನಿಮ್ಮ ನೆತ್ತಿಯ ಭಾಗ ಒಣಗ ದಂತೆ ಇದು ಕಾಪಾಡುತ್ತದೆ ಮತ್ತು ತಲೆ ಕೂದಲಿಗೆ ಪೌಷ್ಟಿಕಾಂಶ ಗಳನ್ನು ಒದಗಿಸುತ್ತದೆ.​

ತುಪ್ಪ ಒಂದು ನೈಸರ್ಗಿಕ ಮಾಯಿಶ್ಚರೈಸರ್ ಆಗಿರುವುದರಿಂದ ನಿಮ್ಮ ತ್ವಚೆಯನ್ನು ಒಳಗಿನಿಂದ ತೇವಾಂಶ ಕೂಡಿರುವಂತೆ ಮಾಡುತ್ತದೆ.ಮ್ಮ ತ್ವಚೆ ಹೆಚ್ಚು ಮೃದು ಮತ್ತು ಕೋಮಲವಾಗುವುದು ಮಾತ್ರ ವಲ್ಲದೆ ಚರ್ಮದ ಸಮಸ್ಯೆಗಳಿಂದ ಮುಕ್ತವಾಗುತ್ತದೆ. ನಿಮ್ಮ ನೆತ್ತಿಯ ಭಾಗ ಒಣಗದಂತೆ ಇದು ಕಾಪಾಡುತ್ತದೆ

- Advertisement -

Related news

error: Content is protected !!