


ಇಂಫಾಲ: ಮಣಿಪುರದ ಪಶ್ಚಿಮ ಮತ್ತು ಪೂರ್ವ ಇಂಫಾಲ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ (ಪಿಎಲ್‌ಎ) ಸೇರಿದ ದಂಗೆಕೋರನನ್ನು ಪಶ್ಚಿಮ ಇಂಫಾಲ ಜಿಲ್ಲೆಯ ಲ್ಯಾಲ್ಡಿಂಗ್ ಅವಾಂಗ್ ಲೈಕೈನಿಂದ ಬಂಧಿಸಲಾಗಿದೆ. ಬಂಧಿತನನ್ನು ಯುಮ್ನಾಮ್ ಪ್ರೇಮ್‌ಕುಮಾರ್ ಸಿಂಗ್ (31) ಎಂದು ಗುರುತಿಸಲಾಗಿದೆ. ಈತ ಸರ್ಕಾರಿ ಮತ್ತು ಖಾಸಗಿ ಶಾಲೆ ಸೇರಿದಂತೆ ಇತರೆ ಸಂಸ್ಥೆಗಳಿಂದ ಸುಲಿಗೆ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಪ್ರೆಪಕ್-(ಪ್ರೊ) ಸಂಘಟನೆಯ ಸಕ್ರಿಯ ಕಾರ್ಯಕರ್ತನನ್ನು ಪಶ್ಚಿಮ ಇಂಫಾಲ ಜಿಲ್ಲೆಯ ಹೈರಂಗೋಯಿಥಾಂಗ್‌ನಿಂದ ಬಂಧಿಸಲಾಗಿದೆ. ಕೆಸಿಪಿನ (ಎಂಎಫ್‌ಎಲ್) ಮತ್ತೊಬ್ಬ ಉಗ್ರನನ್ನು ಪೂರ್ವ ಇಂಫಾಲ ಜಿಲ್ಲೆಯ ನಾಂಗ್‌ಪೋಕ್ ಸಂಜೆನ್‌ಬಾಮ್ ಖುಲ್ಲೆನ್‌ನಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಷ್ಣುಪುರ ಜಿಲ್ಲೆಯ ಟೆರಾಖೋಂಗ್‌ಶಾಂಗ್ಲಿ ಮಾನಿಂಗ್ ಲೈಥೆಲ್‌ನಲ್ಲಿ ಇರಿಸಲಾಗಿದ್ದ 51 ಎಂಎಂ ಐಎಲ್‌ಎಲ್‌ಜಿ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ತಂಡವು ನಿಷ್ಕ್ರಿಯಗೊಳಿಸಿದೆ ಎನ್ನಲಾಗಿದೆ.