Thursday, June 4, 2026
spot_imgspot_img
spot_imgspot_img

ಟಿಕ್‍ಟಾಕ್ ರೀಲ್‍ನಲ್ಲಿ ಭಾರೀ ಫೇಮಸ್ಸು..! ಹೈಟೆಕ್ ಆಗಿ ವೇಶ್ಯಾವಾಟಿಕೆ ಮಾಡುತ್ತಿದ್ದ ಚೆಲುವೆ ಅಂದರ್

- Advertisement -
- Advertisement -

ಆ್ಯಪ್ ಮೂಲಕ ಯುವಕರನ್ನು ಸೆಳೆದು ಹೈಟೆಕ್ ಆಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಮೇಟಗಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಕೆ.ಆರ್.ನಗರ ಮೂಲದ ಸುಮ(32) ಬಂಧಿತಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೈಸೂರಿನ ಕುಂಬಾರ ಕೊಪ್ಪಲಿನ ಕಿಡಿಗಣ್ಣಮ್ಮನ ಬಡಾವಣೆಯಲ್ಲಿ ಮನೆ ಮಾಡಿಕೊಂಡು ಈಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಈಕೆಯೊಂದಿಗೆ ಸಿದ್ದರಾಜು (37) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಆ್ಯಪ್ ಮೂಲಕ ಸುಮ ಯುವಕರನ್ನು ಸೆಳೆಯುತ್ತಿದ್ದಳು. ಈ ಹಿಂದೆ ಕೆಲವೆಡೆ ಪೊಲೀಸರು ವೇಶ್ಯಾವಾಟಿಕೆ ಸಂಬಂಧ ದಾಳಿ ನಡೆಸಿದಾಗ ಈಕೆ ಸಿಕ್ಕಿ ಬಿದ್ದಿದ್ದು, ಪೆÇಲೀಸರ ಬಳಿ ತಾನು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೆÇಲೀಸರು ರಕ್ಷಿತ ಮಹಿಳೆ ಎಂದು ಪರಿಗಣಿಸಿ, ಬಿಡುಗಡೆ ಮಾಡಿದ್ದರು. ಈಗ ಆಕೆಯೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಟಗಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮ ಟಿಕ್‍ಟಾಕ್, ರೀಲ್ಸ್ ಸೇರಿ ಮತ್ತಿತರ ಆಕ್ಟಿಂಗ್ ವಿಡಿಯೋ ಆ್ಯಪ್ ಹೆಚ್ಚಾಗಿ ಬಳಸಿ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಳು. ನಂತರ ನಯವಾಗಿ ಮಾತನಾಡಿ ಡೀಲ್ ಕುದುರಿಸುತ್ತಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!