- Advertisement -
- Advertisement -

ಹಾವೇರಿ: ಸ್ಪಿರಿಟ್ ತುಂಬಿದ ಲಾರಿಯ ಟೈಯರ್ ಬ್ಲಾಸ್ಟ್ , ಲಾರಿಗೆ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ದೊಡ್ಡ ದುರಂತವೊಂದು ತಪ್ಪಿರುವ ಘಟನೆ ಹಾವೇರಿಯ ತೋಟದಯಲ್ಲಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ನಡೆದಿದೆ.
ಸ್ಪಿರಿಟ್ ತುಂಬಿದ ಲಾರಿ ಬೆಳಗಾವಿಯಿಂದ ಬೆಂಗಳೂರು ಕಡೆ ಹೊರಟ್ಟಿತ್ತು. ಲಾರಿಯಲ್ಲಿ ಸುಮಾರು 24 ಲಕ್ಷ ರೂ. ಮೌಲ್ಯದ ವೈಟ್ ಸ್ಪಿರಿಟ್ ತುಂಬಿತ್ತು.
ಲಾರಿಯ ಟೈಯರ್ ಹೀಟ್ ಆಗಿದ್ದರಿಂದ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆಯಿಂದ ಮುಂದಾಗುವ ದುರಂತ ತಪ್ಪಿಸಿದ್ದಾರೆ. ಹೆದ್ದಾರಿಯಲ್ಲಿ ಸ್ವಲ್ಪ ದೂರದಲ್ಲೇ ಎಲ್ಲಾ ವಾಹನಗಳನ್ನು ನಿಲ್ಲಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -