Friday, March 29, 2024
spot_imgspot_img
spot_imgspot_img

ನಾಲ್ಕು ದಶಕಗಳ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿದ ಭಾರತ

- Advertisement -G L Acharya panikkar
- Advertisement -

ಇಂದು ನಡೆದ ಹಾಕಿ ಪಂದ್ಯದಲ್ಲಿ ಜರ್ಮನಿ ತಂಡವನ್ನು ಸೋಲಿಸಿದ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ. ಒಲಿಂಪಿಕ್ ಹಾಕಿಯಲ್ಲಿ ಇಂದು ಭಾರತದ ನಾಲ್ಕು ದಶಕಗಳ ನಂತರ ಗೆಲುವು ಕಂಡಿದೆ.ಇಂದಿನ ಪಂದ್ಯದಲ್ಲಿ ಭಾರತ ತಂಡ 5-4 ಗೋಲುಗಳ ಅಂತರದಿಂದ ಜಯಿಸಿತು. ಇದರೊಂದಿಗೆ 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತು.

ಮೊದಲ ಕ್ವಾರ್ಟರ್ ನಲ್ಲಿಯೇ ಗೋಲು ಗಳಿಸಿದ ಜರ್ಮನಿ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಕ್ವಾರ್ಟರ್ ನ 13ನೇ ನಿಮಿಷದಲ್ಲಿ ಸಿಮ್ರನ್ ಜೀತ್ ಭಾರತದ ಮೊದಲ ಗೋಲು ಗಳಿಸಿದರು. ನಂತರ ಜರ್ಮನಿ ಸತತ ಎರಡು ಗೋಲು ಗಳಿಸಿ 3-1 ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ಮತ್ತೆ ಹಾರ್ದಿಕ್ ಮತ್ತು ಸಿಮ್ರನ್ ಜೀತ್ ತಲಾ ಒಂದು ಗೋಲು ಗಳಿಸಿದರು. ಎರಡನೇ ಕ್ವಾರ್ಟರ್ ಅಂತ್ಯಕ್ಕೆ ಭಾರತ ಮತ್ತು ಜರ್ಮನಿ ತಂಡಗಳು 3-3 ಗೋಲು ಗಳಿಸಿದ್ದವು.

- Advertisement -

Related news

error: Content is protected !!