Sunday, June 14, 2026
spot_imgspot_img
spot_imgspot_img

ಸೆ.17 ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ಕ್ಲಬ್ ಹೌಸ್ ನಲ್ಲಿ ‘ಸಿಂಹಾಭಿವಂದನ’

- Advertisement -
- Advertisement -
driving

ಸೆಪ್ಟೆಂಬರ್ 17 ಪ್ರಧಾನಿ ನರೆಂದ್ರ ಮೋದಿಯವರ ಜನ್ಮದಿನ. ದೇಶದ ಪ್ರಧಾನಿಯವರ ಜನ್ಮದಿನದ ಆಚರಣೆಗೆ ಈಗಾಗಲೇ ಸಿದ್ಧತೆಗಳು ಶುರುವಾಗಿದೆ. ಅದರಲ್ಲೂ ಗುಜರಾತಿನಲ್ಲಿ ಭಾರೀ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇನ್ನು ಬಿಜೆಪಿ ಕಾರ್ಯಕರ್ತರು, ಸಂಘಟನೆಯ ಕಾರ್ಯಕರ್ತರು ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೋಶಿಯಲ್ ಮಿಡಿಯಾಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ಇದೇ ಸೆಪ್ಟೆಂಬರ್ 17 ರ ಸಂಜೆ 7.30 ಕ್ಕೆ ಮೋದಿಜಿ ಹುಟ್ಟುಹಬ್ಬದ ಪ್ರಯುಕ್ತ ಕ್ಲಬ್ ಹೌಸ್ ನಲ್ಲಿ ಆಚರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ. ಮತ್ತೊಂದು ವಿಶೇಷದ ಸಂಗತಿಯೆಂದರೆ ಪ್ರತಾಪ್ ಸಿಂಹ ಮೋದಿಯವರ ಕುರಿತು ಪುಸ್ತಕವೊಂದನ್ನು ರಚಿಸಿದ್ದಾರೆ. ಮೋದಿ ಬದುಕು ಮತ್ತು ಪ್ರಧಾನಿಯಾದ ನಂತರ ನೆಡೆದ ಘಟನೆಗಳನ್ನಾಧರಿಸಿದ ಹೊತ್ತಿಗೆಯ ಕುರಿತು ಮಾತಾಡಲಿದ್ದಾರೆ.

ಇನ್ನು ಇದೆ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯನ್ನ ರಮ್ಯ ವಸಿಷ್ಟ ಅವರು ವಹಿಸಲಿದ್ದಾರೆ. ಪ್ರಾಸ್ತವಿಕ ಭಾಷಣವನ್ನು ಪವನ್ ಕುಮಾರ್ ಅವರು ಮಾಡಲಿದ್ದಾರೆ. ಮೋದಿಯವರ ಹುಟ್ಟು ಹಬ್ಬದ ದಿನ ನೆಡೆಯುವ ಈ ಕಾರ್ಯಕ್ರಮಕ್ಕೆ ನೀವು ಕಿವಿಯಾಗಲಿದ್ದೀರಿ ತಾನೇ?

- Advertisement -

Related news

error: Content is protected !!