Monday, April 29, 2024
spot_imgspot_img
spot_imgspot_img

ಟೋವಿನೋ ಥಾಮಸ್- ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ!!!

- Advertisement -G L Acharya panikkar
- Advertisement -

ಕೊಚ್ಚಿ : ಮಲಯಾಳಂನ ಜನಪ್ರಿಯ ನಟ ಟೋವಿನೋ ಥಾಮಸ್‌ಗೆ ಗಂಭೀರ ಗಾಯವಾದ ಪರಿಣಾಮ, ಅವರನ್ನು ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿರ್ದೇಶಕ ವಿ.ಎಸ್.ರೋಹಿತ್ ನಿರ್ದೇಶನದ ಕಳಾ ಚಿತ್ರದ ಚಿತ್ರೀಕರಣ ಎರ್ನಾಕುಲಂನಲ್ಲಿ ನಡೆಯುತ್ತಿತ್ತು. ಟೊವಿನೋ ಥಾಮಸ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಸ್ಟಂಟ್ ದೃಶ್ಯದ ಚಿತ್ರೀಕರಣ ವೇಳೆ ಈ ಘಟನೆ ನಡೆದಿದ್ದು, ತಾತ್ಕಾಲಿಕವಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.


ಫೈಟಿಂಗ್ ದೃಶ್ಯದ ಚಿತ್ರೀಕರಣ ವೇಳೆ ನಟ ಟೊವಿನೋ ಥಾಮಸ್ ಆವರ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿತ್ತು. ಆದರೆ, ನಟ ಇದನ್ನು ನಿರ್ಲಕ್ಷಿಸಿ ಚಿತ್ರೀಕರಣ ಮುಂದುವರಿಸಿದ್ದರು ಎನ್ನಲಾಗಿದೆ. ಇಂದು (ಅ.7) ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣವೇ ಪರಿಶೀಲಿಸಿದ ವೈದ್ಯರು ನಟನ ಹೊಟ್ಟೆಯ ಭಾಗಕ್ಕೆ ಹೊಡೆತ ಬಿದ್ದು ಆಂತರಿಕ ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!