Monday, January 25, 2021

ಚಿಕ್ಕಬಳ್ಳಾಪುರ: ಲಾರಿಗಳು ಮುಖಾಮುಖಿ ಡಿಕ್ಕಿ. ಓರ್ವ ಸಾವು..ನಾಲ್ವರ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರಿಗೆ ಗಂಭೀರ ವಾಗಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹೊಸಹಳ್ಳಿ ಗೇಟ್ ಬಳಿ ನಡೆದಿದೆ.

ತಮಿಳುನಾಡಿನಿಂದ ಆಲೂಗಡ್ಡೆ ತುಂಬಿಕೊಂಡು ಆಂಧ್ರಪ್ರದೇಶದತ್ತ ತೆರಳುತ್ತಿದ್ದ ಲಾರಿ, ಆಂಧ್ರದಿಂದ ಲೋಹದ ಶೀಟ್ ರೋಲ್ ತುಂಬಿಕೊಂಡು ಬಂದ ಲಾರಿ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!