Saturday, April 20, 2024
spot_imgspot_img
spot_imgspot_img

ಟ್ರ್ಯಾಕ್ಟರ್​ ಪಲ್ಟಿ: ಸ್ಥಳದಲ್ಲೇ ಇಬ್ಬರ ಸಾವು: 7 ಮಂದಿ ಗಂಭೀರ!

- Advertisement -G L Acharya panikkar
- Advertisement -

‌ಗದಗ: ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ನಡೆದಿದೆ. ಸರೋಜವ್ವ ಹಿತ್ತಲಮನಿ (40), ಸೋಮವ್ವ ಅಡುಗೆಮನಿ (48) ಮೃತ ದುರ್ದೈವಿಗಳು.

ಕೂಲಿಗೆ ತೆರಳಿದ್ದವರು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಆಯತಪ್ಪಿ ಟ್ರಾಕ್ಟರ್​ ಪಲ್ಟಿಯಾಗಿದೆ. ಪಲ್ಟಿಯ ರಭಸಕ್ಕೆ ಟ್ರಾಕ್ಟರ್​ ಕೆಳಗೆ ಸಿಲುಕಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!