Tuesday, April 30, 2024
spot_imgspot_img
spot_imgspot_img

ಮೊಬೈಲ್ ಫೋನ್ ನೋಡುತ್ತಾ ಕುಳಿತ ಆಪರೇಟರ್: ಪ್ಲಾಟ್‌ಫಾರ್ಮ್ ಏರಿದ ರೈಲು

- Advertisement -G L Acharya panikkar
- Advertisement -

ರೈಲ್ವೆ ನಿಲ್ದಾಣದಲ್ಲಿ ರೈಲೊಂದು ಹಳಿ ತಪ್ಪಿ ಪ್ಲಾಟ್‌ಫಾರ್ಮ್ ಹತ್ತಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ನಡೆದಿತ್ತು. ಘಟನೆ ಸಂಬಂಧ ರೈಲ್ವೆ ಅಧಿಕಾರಿಗಳು ಒಟ್ಟು ಐವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಅಪಘಾತಕ್ಕೂ ಮುನ್ನ ರೈಲ್ವೆ ಆಪರೇಟರ್, ಕ್ಯಾಬ್ ಒಳಗೆ ಬ್ಯಾಗ್ ಇರಿಸಿ, ಮೊಬೈಲ್ ನೋಡುವುದರಲ್ಲಿ ಮಗ್ನನಾಗಿರುವುದು ಕಂಡುಬಂದಿದೆ

ನಿಲ್ದಾಣಕ್ಕೆ ರೈಲು ತಲುಪಿದ ಬಳಿಕ ಲೋಕೋ ಪೈಲಟ್ ತನ್ನ ಕರ್ತವ್ಯ ಮುಗಿಸಿ ಕ್ಯಾಬ್‌ನಿಂದ ನಿರ್ಗಮಿಸಿದ್ದ. ಬಳಿಕ ಕ್ಯಾಬ್ ಒಳಗೆ ಪ್ರವೇಶಿಸಿದ ರೈಲ್ವೆ ಸಿಬ್ಬಂದಿ ಸಚಿನ್, ತನ್ನ ಬೆನ್ನಲ್ಲಿದ್ದ ಚೀಲವನ್ನು ಎಂಜಿನ್ ಥ್ರೋಟಲ್ ಮೇಲೆ ಇರಿಸಿ, ಆಸನದಲ್ಲಿ ಕುಳಿತಿದ್ದಾನೆ. ನಂತರ ಮೊಬೈಲ್ ಫೋನ್‌ನಲ್ಲಿ ಏನನ್ನೋ ನೋಡಲು ಆರಂಭಿಸಿದ್ದಾನೆ.

ಆತ ಕ್ಯಾಬ್ ಪ್ರವೇಶಿಸಿದ ನಿಮಿಷದ ಒಳಗೆ ರೈಲು ಮುಂದೆ ಸಾಗಲು ಆರಂಭಿಸಿತ್ತು. ಹಳಿಯ ಕೊನೆಯ ಘಟ್ಟವನ್ನು ದಾಟಿ ರೈಲಿನ ಅರ್ಧ ಭಾಗ ಪ್ಲಾಟ್‌ಫಾರ್ಮ್ ಮೇಲೆ ಹತ್ತಿತ್ತು. ಸಚಿನ್ ಮೊಬೈಲ್ ಫೋನ್‌ನಲ್ಲಿ ಮುಳುಗಿರುವುದು ರೈಲಿನ ಒಳಗಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಡೆದ ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಘಟನೆ ಸಂಬಂಧ ತನಿಖೆ ನಡೆಸಿದ ರೈಲ್ವೆ ಅಧಿಕಾರಿಗಳು ಲೋಕೋ ಪೈಲಟ್ ಹಾಗೂ ನಾಲ್ವರು ತಾಂತ್ರಿಕ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಕರ್ತವ್ಯದ ವೇಳೆ ಮೊಬೈಲ್ ಫೋನ್‌ಗಳನ್ನು ಬಳಸುವುದು ಕಂಡುಬಂದಿದೆ ಎಂದು ಮಥುರಾ ರೈಲ್ವೆ ನಿಲ್ದಾಣದ ನಿರ್ದೇಶಕ ತಿಳಿಸಿದ್ದಾರೆ.

- Advertisement -

Related news

error: Content is protected !!