Saturday, June 28, 2025
spot_imgspot_img
spot_imgspot_img

ರೈಲ್ವೆ ಹಳಿ ಮೇಲೆ ರೀಲ್ಸ್‌ – ರೈಲು ಡಿಕ್ಕಿ ಹೊಡೆದು ಬಾಲಕ ಮೃತ್ಯು

- Advertisement -
- Advertisement -

ಇತ್ತೀಚೆಗೆ ಹೆಚ್ಚು, ಹೆಚ್ಚು ಜನರನ್ನು ಸೆಳೆಯಲು ರೀಲ್ಸ್ ಹುಚ್ಚಾಟದ ವ್ಯಾಮೋಹಕ್ಕೆ ಒಳಗಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಘಟನೆ ನಡೆಯುತ್ತಿದ್ದು, ಇದೀಗ ಅಂತಹದೇ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್‌ ಮಾಡಲು ಮುಂದಾದ ಸಂದರ್ಭದಲ್ಲಿ ಏಕಾಏಕಿ ರೈಲು ಡಿಕ್ಕಿ ಹೊಡೆದು ಬಾಲಕ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.

ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈತ ಸಾಯುವ ಕೊನೆಯ ಕ್ಷಣದ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ. ಫಾರ್ಮನ್( 14 ) ಎಂಬ ಬಾಲಕ ರೀಲ್ಸ್ ಮಾಡಲು ರೈಲ್ವೆ ಹಳಿ ಮೇಲೆ ಕಾಲಿಡುತ್ತಿದ್ದಂತೆಯೇ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಫಾರ್ಮನ್ ಗೆಳೆಯ ಈ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದು, ಏಕಾಏಕಿ ಸಂಭವಿಸಿದ ಘಟನೆಯಿಂದ ಆತ ಆಘಾತಕ್ಕೊಳಗಾಗಿರುವುದಾಗಿ ವರದಿಯಾಗಿದೆ. ವರದಿಯ ಪ್ರಕಾರ, ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದು, ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!