- Advertisement -
- Advertisement -
ಅಮೆರಿಕಾ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಡೊನಾಲ್ಡ್ ಟ್ರಂಪ್ ಹಲವು ವಿವಾದಗಳಿಂದ ಸುದ್ದಿಯಾದರು. ಇದೀಗ ತಮ್ಮ ರೋಲ್ಸ್‌ರಾಯ್ಸ್ ಕಾರಿನ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಟ್ರಂಪ್ ಹರಾಜಿಗಿಡಲು ಮುಂದಾಗಿರುವ ಕಾರನ್ನು ಕೇರಳ ಮೂಲದ ಉದ್ಯಮಿಯೊಬ್ಬರು ಕೊಳ್ಳಲು ತೀರ್ಮಾನಿಸಿದ್ದಾರೆ.ಕೇರಳದ ಆಭರಣ ಉದ್ಯಮಿ ಬಾಬಿ ಚೆಮ್ಮನೂರ್ ಟ್ರಂಪ್ ಕಾರು ಖರೀದಿಸಲು ಮುಂದಾಗಿರುವ ಉದ್ಯಮಿ.
ಟ್ರಂಪ್ ಅಧ್ಯಕ್ಷರಾಗಿದ್ದಾಗಿನಿಂದ ಈ ಕಾರನ್ನು 91 ಸಾವಿರದ 249 ಕಿಲೋಮೀಟರ್ ಓಡಿಸಿದ್ದಾರೆ. ಈ ಮೊದಲು 2017ರಲ್ಲಿ ಡೊನಾಲ್ಡ್ ಟ್ರಂಪ್ ಬಳಸಿದ್ದ ಫೆರಾರಿ ಕಾರನ್ನು 270,000 ಡಾಲರ್‌ಗೆ ಹರಾಜು ಹಾಕಲಾಗಿತ್ತು. ಈ ಕಾರನ್ನು ಎಷ್ಟಕ್ಕೆ ಹರಾಜಿಗಿಟ್ಟಿದ್ದಾರೆ ಅನ್ನೋದು ಇನ್ನೂ ತಿಳಿದಿಲ್ಲ!.
- Advertisement -