Sunday, June 14, 2026
spot_imgspot_img
spot_imgspot_img

ಮುಂಬೈನಲ್ಲಿ ದಾಖಲೆ ಬರೆದ “ಧರ್ಮ ಚಾವಡಿ”ತುಳು ಚಿತ್ರ

- Advertisement -
- Advertisement -

ಮುಂಬೈ ತುಳುವರು ಒಳ್ಳೆ ತುಳು ಚಿತ್ರಗಳನ್ನು ಅಪ್ಪಿಕೊಳ್ಳುತ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಧರ್ಮ ಚಾವಡಿ ತುಳು ಚಿತ್ರ. ಕಳೆದ ವರುಷ ಧರ್ಮ ದೈವ ಚಿತ್ರ ಕೂಡ ಇಲ್ಲಿ ಯಶಸ್ವಿಗಳಿಸಿತ್ತು, ಇದೀಗ ಧರ್ಮ ಚಾವಡಿ ಅದಕ್ಕಿಂತಲೂ ಹೆಚ್ಚು ಜನಪ್ರಿಯತೆಯನ್ನು ಪಡೆದು ಮುನ್ನುಗ್ಗುತ್ತಿದೆ.

ಈಗಾಗಲೇ 7 ಪ್ರದರ್ಶನಗಳು ಮುಂಬೈನಲ್ಲಿ ನಡೆದಿದ್ದು ಎಲ್ಲವು ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದರಲ್ಲೂ ವಿಶೇಷವೆಂದರೆ ಪ್ರದರ್ಶನಗೊಂಡ ಥಿಯೇಟ್‌ನಲ್ಲಿ 350+ಕ್ಕು ಹೆಚ್ಚು ಸಿಟರ್‌ನ ಸ್ಕ್ರೀನ್ ನಲ್ಲೆ ಇಲ್ಲಿವರೆಗಿನ ಪ್ರದರ್ಶನ ನಡೆದಿದೆ ಎಂಬುದು ವಿಶೇಷ. ಬಾಬಾ ಪ್ರಸಾದ್ ಅರಸ ಅವರ ಸಂಚಾಲತ್ವದಲ್ಲಿ ಮುಂಬೈ ನಲ್ಲಿ ಪ್ರದರ್ಶನ ಗೊಳ್ಳುತ್ತಿದ್ದು ಕಳೆದ ವಾರ ಮುಲುನ್ಡ್ ನಲ್ಲಿ 471 ಸಿಟರ್ ನ ಸ್ಕ್ರೀನ್ ಪೂರ್ತಿಯಾಗಿ ಹೊಸ ದಾಖಲೆಯನ್ನೇ ಬರೆದಿದೆ. ಕಲ್ಯಾಣ್‌‌ನಲ್ಲಿ ನಾಗಕಿರಣ್ ಶೆಟ್ಟಿ ನುಳಿಯಾಲು ಅವರ ನೇತೃತ್ವದಲ್ಲಿ ಯಶಸ್ವಿ ಪ್ರದರ್ಶನ ಗೊಂಡಿದ್ದು ಒಸೈ ನಲ್ಲಿ ಶ್ರೀ ಕಟೀಲ್ ಯಕ್ಷ ವೇದಿಕೆಯ ಸಹಕಾರದೊಂದಿಗೆ ಪ್ರದರ್ಶನ 300ಕ್ಕು ಅಧಿಕ ಸಂಖ್ಯೆಯ ಎರಡು ಸ್ಕ್ರೀನ್ ನಲ್ಲಿ ಪ್ರದರ್ಶನ ನಡೆದು ವಿನೂತನ ದಾಖಲೆ ಚಿತ್ರ ಬರೆದಿದೆ.

ರಮೇಶ್ ರೈ ಕುಕ್ಕುವಳ್ಳಿ, ರವಿ ಸ್ನೇಹಿತ್, ರಕ್ಷನ್ ಮಾಡೂರು, ಚೇತನ್ ರೈ ಮಾಣಿ, ಪ್ರಕಾಶ್ ಧರ್ಮನಗರ, ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಸುರೇಶ್ ರೈ, ರೂಪ ಡಿ ಶೆಟ್ಟಿ, ಧನ್ಯ ಪೂಜಾರಿ, ನೇಹಾ ಕೋಟ್ಯಾನ್, ನಿಶ್ಮಿತಾ ಶೆಟ್ಟಿ, ಸವಿತಾ ಅಂಚನ್, ಮನೀಶ್ ಶೆಟ್ಟಿ, ಗಣರಾಜ್ ಭಂಡಾರಿ ಸೇರಿದಂತೆ ಅನೇಕ ಯುವ ಪ್ರತಿಭೆಗಳು ನಟಿಸಿದ್ದು ಚಿತ್ರವನ್ನು ಧರ್ಮ ದೈವ ಖ್ಯಾತಿಯ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ನಿರ್ದೇಶನ ಮಾಡಿದ್ದು ಜಗದೀಶ್ ಅಮೀನ್ ನಡುಬೈಲು ನಿರ್ಮಾಣ ಮಾಡಿದ್ದಾರೆ.

- Advertisement -

Related news

error: Content is protected !!