Saturday, April 27, 2024
spot_imgspot_img
spot_imgspot_img

ಹಿಮಗಿರಿಯಲ್ಲಿ ತುಳುನಾಡಿನ ಬಾವುಟ..! ಪರ್ವತಾರೋಹಿಯ ಕಾರ್ಯಕ್ಕೆ ಭೇಷ್ ಎಂದ ತುಳುವರು..!

- Advertisement -G L Acharya panikkar
- Advertisement -

ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥ್‌ನ ಯಾತ್ರೆ ಕೈಗೊಂಡಿದ್ದ ತುಳುನಾಡಿನ ಯುವಕನೋರ್ವ ಅಲ್ಲಿ ತುಳುನಾಡಿನ ಪತಾಕೆಯನ್ನು ಪ್ರದರ್ಶಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ..!

ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು ಸುಮಾರು 7,075 ಮೀ. ಎತ್ತರದ ಎವರೆಸ್ಟ್ ಏರಿ ರಾಷ್ಟ್ರ ಧ್ವಜದ ಜತೆಗೆ ಹೆಮ್ಮೆಯ ತುಳುನಾಡ ಧ್ವಜವನ್ನು ಪ್ರದರ್ಶಿಸಿದ್ದಾರೆ. ಸಮುದ್ರ ಮಟ್ಟದಿಂದ 7,075 ಮೀ. ಎತ್ತರದ ಸತೊಪಂಥ್ ಹಿಮಾಲಯ ಪರ್ವತ ಶ್ರೇಣಿಗಳ ಉತ್ತರಾಖಂಡ್‌ನ ಗರ್ವಾಲ್ ವಿಭಾಗದಲ್ಲಿದೆ.

ವೃತ್ತಿನಿರತ ಪರ್ವಾತ ರೋಹಿಗಳ ದಕ್ಷತೆ, ಕಠಿಣ ಮನಸ್ಥೈರ್ಯದ ತರಬೇತಿಗಾಗಿ ಈ ವಿಶೇಷ ಯಾತ್ರೆಯನ್ನು ಪ್ರಸಾದ್ ವಿಜಯ್ ಶೆಟ್ಟಿ ನೇತೃತ್ವದ ಐದು ಮಂದಿಯ ತಂಡ ಕೈಗೊಂಡಿತ್ತು. 21 ದಿನಗಳ ಯಾತ್ರೆಯನ್ನು ತೀವ್ರ ಹವಾಮಾನ ವೈಪರೀತ್ಯದ ಕಾರಣ ಸತೊಪಂಥ್ ಸಮ್ಮಿಟ್ ಬೇಸ್ ಕ್ಯಾಂಪ್ ನಲ್ಲಿ 6,000 ಮೀ. ವ್ಯಾಪ್ತಿಯಲ್ಲಿ ಸ್ಥಗಿತಗೊಳಿಸಿದರು. ರಾಷ್ಟ್ರಧ್ವಜದ ಜತೆ ತುಳುನಾಡ ಧ್ವಜವನ್ನೂ ಪ್ರದರ್ಶಿಸಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!