Friday, July 24, 2026
spot_imgspot_img
spot_imgspot_img

ತುಮಕೂರು :ಕಾರುಗಳ ಮಧ್ಯೆ ಅಪಘಾತ;ಇಬ್ಬರು ಸಾವು

- Advertisement -
- Advertisement -

ತುಮಕೂರು : ಮೂರು ಕಾರುಗಳ ಮಧ್ಯೆ ಸಂಭವಿಸಿದ ಅಪ‌ಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿರುವ ಘಟನೆ ಬಾಣಾವರ ಗೇಟ್ ಬಳಿ ನಡೆದಿದೆ.

ಯಾದವ ನಗರದ 55 ವರ್ಷದ ಸುರೇಶ್, 60 ವರ್ಷದ ಮುರಳಿ ಮೃತರು. ಸುರೇಶ್ ಗುಬ್ಬಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಅಪಘಾತದಲ್ಲಿ ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣಪ್ಪ, ಜೆಡಿಎಸ್ ವಕ್ತಾರ ಜಯಣ್ಣ, ಮಂಜುನಾಥ್ ಸೇರಿದಂತೆ 5 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮಕೃಷ್ಣಪ್ಪ ಸ್ನೇಹಿತರ ಜತೆಗೆ ಆದಿಚುಂಚನಗಿರಿಗೆ ಹೋಗಿ ಕುಣಿಗಲ್ ಮಾರ್ಗವಾಗಿ ಹಿಂದಿರುಗುತ್ತಿದ್ದರು. ಈ ವೇಳೆ ತುಮಕೂರು ಕಡೆಯಿಂದ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎದುರುಗಡೆ ಬರುತ್ತಿದ್ದ ರಾಮಕೃಷ್ಣಪ್ಪ ಅವರಿದ್ದ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಇದೇ ಕಾರಿನಲ್ಲಿದ್ದ ಸುರೇಶ್, ಮುರಳಿ ಮೃತಪಟ್ಟಿದ್ದಾರೆ. ಕಾರುಗಳು ನಜ್ಜುಗುಜ್ಜಾಗಿವೆ. ಹೆಬ್ಬರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!