Wednesday, July 22, 2026
spot_imgspot_img
spot_imgspot_img

ತುಂಗಾ ನದಿಯಲ್ಲಿ ಸ್ಫೋಟ ಕೇಸ್: ಇಬ್ಬರು ಉಗ್ರರಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

- Advertisement -
- Advertisement -

ಶಿವಮೊಗ್ಗ: ತುಂಗಾ ನದಿ ದಂಡೆ ಮೇಲೆ ಪ್ರಾಯೋಗಿಕ ಸ್ಫೋಟ ಮತ್ತು ಹಿಂದೂ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧಪಟ್ಟಂತೆ ಐಸಿಸ್ ಉಗ್ರ ಸಂಘಟನೆಯ ಇಬ್ಬರು ಸದಸ್ಯರಿಗೆ ಎನ್‌ಐಎ ಕೋರ್ಟ್ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗ ಮೂಲದ ಜಬೀವುಲ್ಲಾ ಹಾಗೂ ನದೀಂ ಫೈಜಲ್ ಶಿಕ್ಷೆಗೊಳಗಾದ ಆರೋಪಿಗಳು. ಆರೋಪಿಗಳಿಗೆ 6 ವರ್ಷಗಳ ಜೈಲು ಶಿಕ್ಷೆ ಜೊತೆಗೆ ತಲಾ 59,000 ರೂ. ದಂಡ ಕೂಡ ವಿಧಿಸಲಾಗಿದೆ.

4 ವರ್ಷಗಳ ಹಿಂದೆ ಆರೋಪಿಗಳು ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಸ್ವಾತಂತ್ರ‍್ಯ ದಿನಾಚರಣೆ ದಿನ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದಿದ್ದರು. 2022ರ ಆ.15 ರಂದು ರಾಜಸ್ಥಾನ ಮೂಲದ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದರು. ಜೊತೆಗೆ ಭಾರತದ ಧ್ವಜ ಸುಟ್ಟ ಪ್ರಕರಣ ಸಂಬಂಧ ಇವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.

- Advertisement -

Related news

error: Content is protected !!