Tuesday, April 30, 2024
spot_imgspot_img
spot_imgspot_img

ಬಂಟ್ವಾಳ : ಅಕ್ರಮ ಮಟ್ಕಾ ದಂಧೆ ಅಡ್ಡೆಗೆ ಪೊಲೀಸ್‌ ದಾಳಿ ನಗದು ಸಹಿತ ಇಬ್ಬರು ವಶ

- Advertisement -G L Acharya panikkar
- Advertisement -

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಅಧಾರದಲ್ಲಿ ಮಟ್ಕಾ ಚೀಟಿ ಬರೆದು ಅಕ್ರಮವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳ ಸಹಿತ ನಗದು-ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮ ದ ಬಿ ಸಿ ರೋಡ್ ಎಂಬಲ್ಲಿ ನಡೆದಿದೆ.

ದಿನಾಂಕ 05-01-2024 ರಂದು ಮಧ್ಯಾಹ್ನ ಸಮಯ, ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮ ದ ಬಿ ಸಿ ರೋಡ್ ಎಂಬಲ್ಲಿ, ಹಣವನ್ನು ಪಣವಾಗಿಟ್ಟುಕೊಂಡು ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಅಧಾರದಲ್ಲಿ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದು, ಆರೋಪಿಗಳಾದ ವರ್ಕಾಡಿ ಗ್ರಾಮ, ಮಂಜೇಶ್ವರ ನಿವಾಸಿ ರಂಜನ್ (26) ಹಾಗೂ ಆಕಾಶ್ ಭವನ, ಮಂಗಳೂರು ನಿವಾಸಿ ಸುರೇಶ್ ಎಚ್. ಶೆಟ್ಟಿ, (56) ಎಂಬವರುಗಳನ್ನು ರಾಮಕೃಷ್ಣ ಪೊಲೀಸ್ ಪೊಲೀಸ್ ಉಪನಿರೀಕ್ಷಕರು (ಕಾ&ಸು)ಬಂಟ್ವಾಳ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿರುತ್ತಾರೆ. ಆರೋಪಿಗಳನ್ನು ತಪಾಸಣೆ ನಡೆಸಿದಾಗ ನಗದು ಹಣ ರೂಪಾಯಿ- 2010/-, ಮಟ್ಕಾ ಚೀಟಿ ಬರೆಯುತ್ತಿದ್ದ ಪುಸ್ತಕ, ಪೆನ್ ಹಾಗೂ 01 ಮೊಬೈಲ್ ಫೋನ್ ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: ನಂ:18/2024 ಕಲಂ : 78 KP Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!