Friday, April 26, 2024
spot_imgspot_img
spot_imgspot_img

ಕಲ್ಲಡ್ಕ : ಲಿಫ್ಟ್ ನಲ್ಲಿ ಸಿಲುಕಿಕೊಂಡ ಬಾಲಕಿಯರು

- Advertisement -G L Acharya panikkar
- Advertisement -

ಬಂಟ್ವಾಳ: ದಿನಪಯೋಗಿ ವಸ್ತು ಗಳನ್ನು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ಮೂವರು ಬಾಲಕಿಯರು ವಸತಿ ಸಮುಚ್ಛಯದ ಲಿಫ್ಟ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಅದರೊಳಗೆ ಸಿಲುಕಿಕೊಂಡ ಘಟನೆ ಸಂಜೆ ಸುಮಾರು 5.30 ವೇಳೆ ಕಲ್ಲಡ್ಕದ ಪ್ರೀತಿ ಟವರ್ ನಲ್ಲಿ ಘಟನೆ ನಡೆದಿದೆ.

ವಸತಿ ಸಂಕೀರ್ಣ ದಲ್ಲಿ ವಾಸವಾಗಿದ್ದ ಬಾಲಕಿಯರ ಜೊತೆಯಲ್ಲಿ ಬಾಲಕಿಯ ಸಂಬಂಧಿ ಬಾಲಕಿಯರು ಬಾಕಿಯಾಗಿದ್ದರು. ಫಿದಾನೈನ ನೇರಳಕಟ್ಟೆ ನಿವಾಸಿ
ಮಯಿಷೀನಾ ಹಾಗೂ ನೇರಳಕಟ್ಟೆ ನಿವಾಸಿ ಸಿಯಾನಾ ಅವರು ಲೆಪ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಫಿದಾನೈನ ಅವಳ ಸಂಬಂಧಿಕರಾದ ಮತ್ತಿಬ್ಬರು ಮಕ್ಕಳು ಮನೆಯಿಂದ ಕೆಳಗೆ ಕಲ್ಲಡ್ಕದಲ್ಲಿರುವ ಅಂಗಡಿಗೆ ಸಾಮಗ್ರಿಗಳ ತರಲೆಂದು ವಸತಿ ಸಂಕೀರ್ಣ ದ ಲಿಫ್ಟ್ ಮೂಲಕ ಕಳೆಗೆ ಬರುತ್ತಿದ್ದಂತೆ ಅರ್ಧದಲ್ಲಿ ತಾಂತ್ರಿಕ

ದೋಷದಿಂದ ಲಿಫ್ಟ್ ಕೆಟ್ಟು ಹೋಗಿದೆ.

ಬಾಲಕಿಯರು ಅ ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು ಮನೆಮಂದಿ ಜೊತೆಗೆ ಸ್ಥಳೀಯರು ಲಿಫ್ಟ್ ನ ಅರ್ಧ ಓಪನ್ ಮಾಡಿ ಅವರಿಗೆ ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಪ್ಯಾನ್ ಒಂದನ್ನು ಇಡುವ ವ್ಯವಸ್ಥೆ ಮಾಡಿದ್ದರು.
ಬಳಿಕ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ಲಿಫ್ಟ್ ನ ತಾಂತ್ರಿಕ ದೋಷವನ್ನು ಸರಿಪಡಿಸಿ ಸುಮಾರು 7.15 ಗಂಟೆಗೆ ಮಕ್ಕಳನ್ನು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದ್ದಾರೆ.ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!