Monday, June 8, 2026
spot_imgspot_img
spot_imgspot_img

ಕಾಸರಗೋಡು ಮೂಲದ ಮಹಿಳೆ ಸಹಿತ ಇಬ್ಬರು ಆಸ್ಟ್ರೇಲಿಯಾದಲ್ಲಿ ಸಮುದ್ರಕ್ಕೆ ಬಿದ್ದು ಮೃತ್ಯು

- Advertisement -
- Advertisement -

ಕಾಸರಗೋಡು : ಆಸ್ಟ್ರೇಲಿಯಾದಲ್ಲಿ ಸಮುದ್ರಕ್ಕೆ ಬಿದ್ದು ಕಾಸರಗೋಡು ಮೂಲದ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಕಾಸರಗೋಡು ತಾಯಲಂಗಾಡಿಯ ಡಾ. ಸಿರಾಜುದ್ದೀನ್ ರವರ ಪತ್ನಿ ಮರ್ವ ಹಾಸಿಮಾ (33) ಮತ್ತು ಕೋಜಿಕ್ಕೋಡ್ ಕೇಳತ್ತರದ ನಿರ್ಷಾ ಹಾರಿಸ್ (38) ಮೃತಪಟ್ಟವರು.

ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಸಂಜೆ 4.30 ಕ್ಕೆ ಘಟನೆ ನಡೆದಿದೆ. ಸಿಡ್ನಿ ಸದರ್ ಲ್ಯಾ೦ಡ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದು , ನಿರ್ಷಾರ ಸಹೋದರಿ ಕೂಡಾ ಅವಘಡಕ್ಕೆ ಸಿಲುಕಿದ್ದು , ಈಕೆಯನ್ನು ರಕ್ಷಣಾ ತಂಡ ಕೂಡಲೇ ಮೇಲಕ್ಕೆತ್ತಿ ರಕ್ಷಿಸಿದೆ. ನಿರ್ಷಾ ಹಾಗೂ ಹಾಸಿಮಾಳನ್ನು ಹೆಲಿಕಾಪ್ಟರ್ ಸಹಾಯದಿಂದ ಸಮುದ್ರದಲ್ಲಿ ಶೋಧಾ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಸಮುದ್ರ ಬಂಡೆಕಲ್ಲುಗಳ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಅಲೆಗಳ ರಭಸಕ್ಕೆ ಸಮುದ್ರ ಪಾಲಾಗಿದ್ದರು ಎನ್ನಲಾಗಿದೆ. ಕಾಸರಗೋಡು ತಾಯಲಂಗಾಡಿ ಡಾ . ಸಿರಾಜುದ್ದೀನ್ ಕುಟುಂಬವು ಹತ್ತು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದು , ರಜೆಯ ಹಿನ್ನಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದರು.

- Advertisement -

Related news

error: Content is protected !!