Monday, May 20, 2024
spot_imgspot_img
spot_imgspot_img

ಕೇಪು: ಬಾವಿಯೊಳಗೆ ಆಕ್ಸಿಜನ್‌ ಸಿಗದೇ ರಿಂಗ್‌ ಕಾರ್ಮಿಕರಿಬ್ಬರು ಮೃತ್ಯು

- Advertisement -G L Acharya panikkar
- Advertisement -

ಕೇಪು: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ.

ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್‌ ನಿವಾಸಿ ಆಲಿ(24) ಎಂದು ಗುರುತಿಸಲಾಗಿದೆ.

ಸುಮಾರು30 ಫೀಟ್‌ ಆಳದ ಬಾವಿಗೆ ರಿಂಗ್‌ ಹಾಕಿ ನಂತರ ಕ್ಲೀನಿಂಗ್‌ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದು, ಇಬ್ಬರೂ ಆಕ್ಸಿಜನ್‌ ಸಿಗದೇ ಮೃತಪಟ್ಟಿದ್ದಾರೆ. ನಂತರ ಸ್ಥಳಿಯರ ಸಹಾಯದಿಂದ ಫ್ರೆಂಡ್ಸ್‌ ವಿಟ್ಲ ಮುರಳೀಧರ ರವರು ಎರಡು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಇಬ್ರಾಹಿಂ ಎನ್ನುವವರು ಕಳೆದ ಇಪ್ಪತ್ತು ವರ್ಷದಿಂದ ರಿಂಗ್‌ ಹಾಕುವಲ್ಲಿ ಪರಿಣಿತರಾಗಿದ್ದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!