Monday, June 8, 2026
spot_imgspot_img
spot_imgspot_img

ಕಾಡು ಹಂದಿಗಾಗಿ ಇಟ್ಟಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಯುವಕರಿಬ್ಬರು ಮೃತ್ಯು..!

- Advertisement -
- Advertisement -
vtv vitla

ಕಾಡು ಹಂದಿಗಾಗಿ ಇಟ್ಟಿದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಯುವಕರಿಬ್ಬರು ಮೃತಪಟ್ಟಿದ್ದು, ಜಮೀನಿನ ಮಾಲಕ ಇವರ ಮೃತದೇಹಗಳನ್ನು ಜಮೀನಿನಲ್ಲೇ ಹೂತು ಹಾಕಿದ ಘಟನೆ ಪಾಲಕ್ಕಾಡ್ ನಡೆದಿದೆ.

ಕೊಡು೦ಬುವಿನ ಅಂಬಲಪರಂಬು ಗ್ರಾಮದ ಪಲ್ಲೀರಿ ಕಾಲನಿಯಲ್ಲಿ ಇಬ್ಬರು ಯುವಕರ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಈ ಕುರಿತು ಜಮೀನು ಮಾಲಕ ಕಾಡು ಹಂದಿಗೆ ತಾನಿಟ್ಟ ಬಲೆಯಿಂದಲೇ ಇವರು ಮೃತಪಟ್ಟಿದ್ದಾರೆಂದು ವಿಚಾರಣೆ ವೇಳೆ ತಪೊಪ್ಪಿಕೊಂಡಿದ್ದಾನೆ. ಯುವಕರಿಬ್ಬರ ಮೃತದೇಹ ಕಂಡು ಗಾಬರಿಯಿಂದ ತಾನು ದಫನ ಮಾಡಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಜಮೀನಿನ ಮಾಲಕ ಅಂಬಲಪರಂಬು ವೀಟ್ಟಿಲ್ ಅನಂತನ್ (52) ಇದೀಗ ಪೊಲೀಸರ ವಶದಲ್ಲಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!