7,86,330 ರೂ. ಮೌಲ್ಯದ ಸೊತ್ತು ವಶ



ಉಡುಪಿ: ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.7,86,330 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕುರ್ಕಾಲು ಗ್ರಾಮದ ನಿವಾಸಿ ಪ್ರೇಮನಾಥ (23), ಪೆರ್ಡೂರಿನ ನಿವಾಸಿ ಶೈಲೇಶ ಶೆಟ್ಟಿ (24) ಬೊಮ್ಮರಬೆಟ್ಟು ನಿವಾಸಿಗಳಾದ ಪ್ರಜ್ವಲ್ (28) ಮತ್ತು ರತನ್ (27) ಎಂದು ಗುರುತಿಸಲಾಗಿದೆ.
ಉಡುಪಿ-ಕಾರ್ಕಳ ಹೆದ್ದಾರಿಯ ನೀರೆ ಎಂಬಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಈ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 87,500 ಮೌಲ್ಯದ 1.112 ಕೆಜಿ ಗಾಂಜಾ, 2,00,000 ರೂ. ಮೌಲ್ಯದ 37.27 ಗ್ರಾಂ ಎಂಡಿಎಂಎ, 4 ಲಕ್ಷ ರೂ. ಮೌಲ್ಯದ ಕಾರು, 50,000 ರೂ. ಮೌಲ್ಯದ ದ್ವಿಚಕ್ರ ವಾಹನ, 7,130 ರೂ. ನಗದು, ಮತ್ತು 41,000 ರೂ. ಮೌಲ್ಯದ 5 ಮೊಬೈಲ್ ಫೋನ್‌ಗಳು ಸೇರಿ ಒಟ್ಟು 7,86,330ರೂ. ರೂ. ಮೌಲ್ಯದ ಸೊತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.


ವಿಚಾರಣೆ ವೇಳೆ ಎಂಡಿಎಂ ಪೌಡರ್ ಅನ್ನು ಬೆಂಗಳೂರಿನಿಂದ ಖರೀದಿಸಿರುವುದಾಗಿ ಆರೋಪಿ ಪ್ರೇಮ್ ತಿಳಿಸಿದ್ದಾನೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








