Wednesday, May 1, 2024
spot_imgspot_img
spot_imgspot_img

ಉಡುಪಿ- 153 ಬಡವರಿಗೆ ಬೋರ್‌ವೆಲ್ ಮತ್ತು ಪಂಪುಸೆಟ್ ವಿತರಣೆ

- Advertisement -G L Acharya panikkar
- Advertisement -

ಉಡುಪಿ(ನ.4): ಸಮಾಜಸೇವಕ ನಕ್ವ ರಹಮತುಲ್ಲಾಹ ಅವರು ಬೆಂಗ್ರೆ, ಕೆಮ್ಮಣ್ಣು, ಕುದ್ರು, ಪಡೆಕರೆ, ಬೈಲಕೆರೆ, ಮಲ್ಪೆ,ನೆರ್ಗಿ ಹಾಗೂ ಬಲರಾಮನಗರದ ಸುಮಾರು 153 ಮಂದಿ ಬಡವರಿಗೆ ಅವರ ಮನೆ ಮುಂದೆ ಬೋರ್‌ವೆಲ್ ನಿರ್ಮಿಸಿ ಅದರ ಪಂಪುಸೆಟ್ಟ್ ವಿತರಣೆಯ ಕಾರ್ಯಕ್ರಮವನ್ನು ಅವರ ನಿವಾಸದಲ್ಲಿ ಆಯೋಜಿಸಿದ್ದರು.

ಮುಖ್ಯ ಅತಿಥಿಗಳಾದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ ಕರಾವಳಿ ಪ್ರದೇಶದಲ್ಲಿ ಆರ್ಥಿಕವಾಗಿ,ಸಾಮಾಜಿಕವಾಗಿ ಸಬಲರಲ್ಲದ ಬಡವರನ್ನು ಗುರುತಿಸಿ ನೀರಿನಂತಹ ಅಮೃತ ಜಲಧಾರೆಯನ್ನೇ ಒದಗಿಸಿದ ರಹಮತುಲ್ಲಾಹ ಕುರಾನಿನ ಸೊಗಡನ್ನು ಮೆತ್ತಿಕೊಂಡು ಸನ್ಮಾರ್ಗದಲ್ಲಿ ನಡೆಯುವ ಇಂತವರೇ ಬಡವರ ಪಾಲಿಗೆ ದೇವರು ಎಂದರು.

ಮಲ್ಪೆ ಆರಕ್ಷಕ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಮಾತನಾಡಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಮಾಡುವವರ ಬಗ್ಗೆ ಅನಗತ್ಯ ಅಪಾದನೆ ಮಾಡುವುದನ್ನು ಬಿಟ್ಟು ಇಂತವರಿಗೆ ಚೈತನ್ಯ ತುಂಬುವ ಜೊತೆಗೆ ಶೋಷಿತರ ಕಣ್ಮಣಿಯಾದ ರೆಹಮತುಲ್ಲಾರಿಗೆ ರ್ಸ್ಪೂತಿಯಾಗಿ ಎಂದು ಹೇಳಿದರು.

ವೇದಿಕೆಯಲ್ಲಿ ಉದ್ಯಮಿ ಆನಂದ ಸಾಲ್ಯಾನ್, ಜನಾಬ್ ಇಸ್ಮಲ್ ಹಾಗೂ ಜನಾಬ್ ಅಕಬ್ಬರ್ ಜೈಲಾಹುದಿ ಉಪಸ್ಥಿತರಿದ್ದರು. ಸಮಾಜಸೇವಕ ನಕ್ವ ರೆಹಮುತುಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಕೃಷ್ಣ ಶ್ರಿಯಾನ್ ವಂದಿಸಿದರು.

- Advertisement -

Related news

error: Content is protected !!