Saturday, June 13, 2026
spot_imgspot_img
spot_imgspot_img

ಉಡುಪಿ: ನಾಯಿ ಅಡ್ಡ ಬಂದು ಬೈಕ್ ಮೈಲಿಗಲ್ಲಿಗೆ ಡಿಕ್ಕಿ ಹೊಡೆದು ಬಾಲಕ ಸಾವು..!

- Advertisement -
- Advertisement -

ಉಡುಪಿ: ನಾಯಿ ಅಡ್ಡ ಬಂದು ರಸ್ತೆ ಬದಿಯ ಮೈಲಿಗಲ್ಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ತೆಂಕ ಎರ್ಮಾಳು ನಿವಾಸಿ ಅಬ್ದುಲ್ ಅಜೀಜ್ ಅವರ ಪುತ್ರ ಶೇಖ್ ಅಬ್ದುಲ್ ಸೈಫಾನ್ ಎಂದು ಗುರುತಿಸಲಾಗಿದೆ.

ತಂದೆ ಮತ್ತು ಮಗ ಪಡುಬಿದ್ರಿಯಲ್ಲಿ ಪುಸ್ತಕಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವರದಿಯ ಪ್ರಕಾರ, ಇದ್ದಕ್ಕಿದ್ದಂತೆ ನಾಯಿಯೊಂದು ರಸ್ತೆಗೆ ಅಡ್ಡ ಬಂದ ಕಾರಣ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಯ ಬದಿಯಲ್ಲಿದ್ದ ಮೈಲಿಗಲ್ಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನ ಒಂದು ಭಾಗ ಬೆಂಕಿಗೆ ಆಹುತಿಯಾಗಿ ಭಾಗಶಃ ಸುಟ್ಟುಹೋಗಿದೆ.

ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸೈಫಾನ್‌ನನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ತಡರಾತ್ರಿ ಕೊನೆಯುಸಿರೆಳೆದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!