Thursday, June 18, 2026
spot_imgspot_img
spot_imgspot_img

ಉಡುಪಿ: ಕೋಚಿಂಗ್ ಸೆಂಟರ್‌ಗೆ ತೆರಳಿದ್ದ ಬಾಲಕ ನಾಪತ್ತೆ; ಪತ್ತೆಗಾಗಿ ಮನವಿ..!

- Advertisement -
- Advertisement -

ಉಡುಪಿ: ಕೋಚಿಂಗ್ ಸೆಂಟರ್‌ಗೆ ತೆರಳಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ನಾಪತ್ತೆಯಾದ ಬಾಲಕ ಬ್ರಹ್ಮಾವರದ ಬಾರ್ಕೂರು ರೋಡ್ ಹಂದಾಡಿಯ ನಿವಾಸಿ ಪ್ರಕಾಶ್ ಎಂಬವರ ಪುತ್ರ ಆರ್ಯ (13) ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಗ್ಗೆ ಉಡುಪಿಯ ಕಡಿಯಾಳಿಯಲ್ಲಿರುವ ಆಕಾಶ್ ಇನ್‌‌ಸ್ಟಿಟ್ಯೂಟ್‌ಗೆ ತೆರಳಿದ್ದ ಆರ್ಯ ಮನೆಗೆ ವಾಪಸ್ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.ನಾಪತ್ತೆಯಾಗಿರುವ ಬಾಲಕ ಆರ್ಯ ಪತ್ತೆಯಾದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ (0820-2520444) ಮಾಹಿತಿ ನೀಡುವಂತೆ ಅಥವಾ 94810249622 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!