Friday, May 3, 2024
spot_imgspot_img
spot_imgspot_img

ಉಡುಪಿ ಬಹುಮಹಡಿ ಕಟ್ಟಡವೊಂದರ ಪಾರ್ಶ್ವ ಭಾಗ ಕುಸಿತ.! ಓರ್ವ ಮಹಿಳೆಗೆ ಗಾಯ

- Advertisement -G L Acharya panikkar
- Advertisement -

ಉಡುಪಿ: ನಗರ ಚಿತ್ತರಂಜನ್ ಸರ್ಕಲ್ ಸಮೀಪ ರಾಯಲ್  ಮಹಲ್ ನಲ್ಲಿರುವ ಹಳೆಯ ಬಹು ಮಹಡಿ ಕಟ್ಟಡದ ಭಾಗವೊಂದು  ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.

ಚಿತ್ತರಂಜನ್ ಸರ್ಕಲ್ ನಲ್ಲಿರುವ ರಾಯಲ್ ಮಹಲ್‌ ಕಟ್ಟಡವಾಗಿದ್ದು, ಇದು ಉಡುಪಿ ನಗರದ ಹಳೆಯ ಕಟ್ಟಡಗಳಲ್ಲಿ ಒಂದಾಗಿದೆ. ಈ ಹಳೆಯ ಕಟ್ಟಡದಲ್ಲಿ ಹೋಟೆಲ್, ಬೇಕರಿ, ಭಾರತೀಯ ಜನೌಷಧಿ ಕೇಂದ್ರ, ಚಿಪ್ಸ್ ಅಂಗಡಿ ಸೇರಿದಂತೆ ಐದಾರು ಅಂಗಡಿಗಳಿದ್ದವು.

ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆ ಜನರು ಕಟ್ಟಡದಿಂದ ದೂರ ಓಡಿದ್ದು , ಈ ವೇಳೆ ಓರ್ವ ಮಹಿಳೆ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!