Friday, October 16, 2026
spot_imgspot_img
spot_imgspot_img

ಉಡುಪಿ: ರಿವರ್ಸ್ ತೆಗೆಯಲು ಹೋಗಿ ಬಾವಿಗೆ ಬಿದ್ದ ಕಾರು!

- Advertisement -
- Advertisement -

ಉಡುಪಿ: ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾರನ್ನು ರಿವರ್ಸ್ ತೆಗೆಯುವಾಗ ಬಾವಿಗೆ ಬಿದ್ದಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ಖ್ಯಾತ ಶ್ರೀಕೃಷ್ಣ ಪಂಚಾಂಗ ಕರ್ತೃ ಶ್ರೀನಿವಾಸ ಅಡಿಗರ ಸೊಸೆ ಕಾರನ್ನು ರಿಸರ್ವ್ ತೆಗೆಯುವಾಗಿ ಬ್ರೇಕ್ ಬದಲಿಗೆ ಎಕ್ಸಲೇಟರ್ ಒತ್ತಿದ ಹಿನ್ನಲೆ ಕಾರು ಒಮ್ಮೆಲೆ ಹಿಮ್ಮುಖವಾಗಿ ಚಲಿಸಿದ್ದು, ನೇರವಾಗಿ ಮನೆಯ ಬಾವಿಗೆ ಬಿದ್ದಿದೆ. ಕಾರು ಬಾವಿಗೆ ಬೀಳುತ್ತಿದ್ದಂತೆ ಶ್ರೀನಿವಾಸ ಅಡಿಗರ ಅಡಿಗರ ಸೊಸೆ ಕಾರಿನಿಂದ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ರಾತ್ರಿ ವೇಳೆ ಸ್ಥಳೀಯರ ಮತ್ತು ಕ್ರೇನ್ ಸಹಾಯದಿಂದ ಬಾವಿಯಲ್ಲಿ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಲಾಯಿತು.

- Advertisement -

Related news

error: Content is protected !!