Tuesday, June 16, 2026
spot_imgspot_img
spot_imgspot_img

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ’ಅಮ್ಮಾ ಮಹಾಲಕ್ಷ್ಮೀ’ ಭಕ್ತಿಗೀತೆ ಬಿಡುಗಡೆ

- Advertisement -
- Advertisement -

ಉಡುಪಿ: ವಿಕೆ & ಮ್ಯಾಜಿಕ್ ಮೂಮೆಂಟ್‌ ಪ್ರಸ್ತುತಪಡಿಸುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಅಮ್ಮಾ ಮಹಾಲಕ್ಷ್ಮೀ ಎನ್ನುವ ಭಕ್ತಿಗೀತೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು.

ಉಚ್ಚಿಲ ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವೈಭವದ ದಸರಾ ಮಹೋತ್ಸವವು ವಿಜೃಂಭಿಸುತ್ತಿದ್ದು, ಪ್ರತೀ ದಿನವೂ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಸೆಳೆಯುತ್ತಿದೆ.

ಅಮ್ಮಾ ಮಹಾಲಕ್ಷ್ಮೀ ಭಕ್ತಿಗೀತೆಯನ್ನು ಅ. 4 ರಂದು ಸಂಜೆ ಶ್ರೀ ಕ್ಷೇತ್ರದ ಸಾಂಸ್ಕೃತಿಕ ವೇದಿಕೆಯಲ್ಲಿ ದ ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ ಶಂಕರ್‌ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉಚ್ಚಿಲ ದೇವಸ್ಥಾನದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬಿಡುಗಡೆಗೊಳಿಸಿದರು.

ಲಕ್ಷ್ಮೀ ವಿ ಆಚಾರ್ಯರವರ ನಿರ್ಮಾಣದಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ಕಾವ್ಯಶ್ರೀ ಗಡಿಯಾರ ಧ್ವನಿಯಾಗಿದ್ದಾರೆ. ವೆಂಕಿ ಎರ್ಮಾಲ್‌ ಇವರ ಸಾಹಿತ್ಯದಲ್ಲಿ ಮೂಡಿಬಂದ ಈ ಹಾಡಿಗೆ ದೀಕ್ಷಿತ್‌ ಪೊಳಲಿ ಹಾಗೂ ರಂಜಿತ್‌ ನಾಯ್ಕ್‌ ಸಂಕಲನ ಮಾಡಿದ್ದಾರೆ. ಮಿಕ್ಸಿಂಗ್‌ ಮತ್ತು ಮಾಸ್ಟರಿಂಗ್‌ನಲ್ಲಿ ಶಮೀರ್‌ ಮುಡಿಪು ಕೆಲಸಮಾಡಿದ್ದಾರೆ. ಅಶ್ವಿನಿ ಪೆರುವಾಯಿ ಮತ್ತು ಶರತ್‌ ಕುಲಾಲ್‌, ಸತೀಶ್‌ ಆರ್‌ ಸಾಲ್ಯಾನ್‌ ಇವರ ಸಹಕಾರವಿದೆ.

ತಾಯಿ ಶ್ರೀ ಮಹಾಲಕ್ಷ್ಮೀಯನ್ನು ಭಜಿಸುವ ಅಮ್ಮಾ ಮಹಾಲಕ್ಷ್ಮೀ ಹಾಡು vk films ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಗೊಂಡು ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ.

- Advertisement -

Related news

error: Content is protected !!