Sunday, June 7, 2026
spot_imgspot_img
spot_imgspot_img

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಕೂಲಿ ಕಾರ್ಮಿಕನಿಗೆ ಮಾರಣಾಂತಿಕ ಹಲ್ಲೆ..!

- Advertisement -
- Advertisement -

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೂಲಿ ಕಾರ್ಮಿಕನ ಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ರವಿ(30) ಎಂದು ಗುರುತಿಸಲಾಗಿದೆ.

ವಾರದ ಹಿಂದೆ ಕೂಲಿ ಕೆಲಸಕ್ಕಾಗಿ ಉಡುಪಿಗೆ ಬಂದಿದ್ದು, ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಹತ್ತಿರದ ನಯನಾ ಫ್ಯಾನ್ಸಿ ಸ್ಟೋರ್ ಬಳಿ ಇರುವ ತಿರುಮಲ ಜ್ಯೂವಲ್ಲರ್‍ಸ್‌‌ ಎದುರು ರವಿ ಪರಿಚಯವಿದ್ದ ಹನುಮಂತ ನೊಂದಿಗೆ ಮೊಬೈಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಅದೇ ಸಮಯದಲ್ಲಿ ಹನುಮಂತನು ರವಿರವರ ತುಟಿ ಮತ್ತು ಕೆನ್ನೆಯ ಭಾಗಕ್ಕೆ ಕೈಯಿಂದ ಹೊಡೆದಿದ್ದು ಮುಖವು ರಕ್ತಗಾಯವಾಗಿರುತ್ತದೆ. ನಂತರ ಕಾಲಿನಿಂದ ತುಳಿದು ಕಲ್ಲಿನಿಂದ ತಲೆಗೆ ಹೊಡೆದು ಗಾಯಮಾಡಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!