Sunday, June 14, 2026
spot_imgspot_img
spot_imgspot_img

ಉಡುಪಿ: ಮನೆಯಲ್ಲಿ ಅಗ್ನಿ ಅವಘಡ; ಗಂಭೀರ ಗಾಯಗೊಂಡಿದ್ದ ಬಾರ್‌ ಮಾಲೀಕ ಮೃತ್ಯು, ಪತ್ನಿ ಗಂಭೀರ..!

- Advertisement -
- Advertisement -

ಉಡುಪಿ: ಬೆಳ್ಳಂಬೆಳಗ್ಗೆ ನಗರದ ಬಾರ್‌ವೊಂದರ ಮಾಲಕರ ಮನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಮಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಪತ್ನಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟವರು ನಗರದ ಅಂಬಲಪಾಡಿಯ ಶೆಟ್ಟಿ ಬಾರ್‌ & ರೆಸ್ಟೋರೆಂಟ್‌ನ ಮಾಲೀಕ ರಾಮಾನಂದ ಶೆಟ್ಟಿ (52) ಎಂದು ಗುರುತಿಸಲಾಗಿದೆ.

ಸೋಮವಾರ ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಸಿಲುಕಿದ ಬಾರ್ ಮಾಲಕ ರಮಾನಂದ ಹಾಗು ಪತ್ನಿ ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ರಾಮಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಿಬ್ಬರು ಮನೆಯ ಮೇಲಿನ ಮಹಡಿಯಲ್ಲಿದ್ದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಮನೆ ಸುಟ್ಟು ಕರಕಲಾಗಿದೆ.

- Advertisement -

Related news

error: Content is protected !!