Monday, June 15, 2026
spot_imgspot_img
spot_imgspot_img

ಉಡುಪಿ: ಯುವತಿ ಕುಸಿದು ಬಿದ್ದ ಮೃತ್ಯು

- Advertisement -
- Advertisement -

ಉಡುಪಿ: ಕ್ರಿಶ್ಚಿಯನ್ನರಲ್ಲಿ ಮದುವೆ ಮುನ್ನಾ ದಿನ ನಡೆಯುವ ರೋಸ್‌ ಸಮಾರಂಭಕ್ಕೆ ಬಂದಿದ್ದ ಯುವತಿಯೊಬ್ಬರು ಕುಳಿತಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉಡುಪಿಯ ಕೊಳಲಗಿರಿಯ ಹಾವಂಜೆಯ ನಿವಾಸಿಯಾಗಿರುವ ಜ್ಯೋತ್ಸ್ನಾ ಲೂವಿಸ್‌ (೨೩) ಮೃತಪಟ್ಟ ಯುವತಿ.

ಜ್ಯೋತ್ಸ್ನಾ ಲೂವಿಸ್ ಅವರು (ನ. 23) ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮದುವೆ ಮನೆಗೆ ಬಂದಿದ್ದರು. ರಾತ್ರಿ ೮.೩೦ರ ಹೊತ್ತಿಗೆ ಇತರರೆಲ್ಲ ಪಾನೀಯಗಳನ್ನು ಸೇವಿಸುತ್ತಾ, ನೃತ್ಯ ಮಾಡುತ್ತಾ ಖುಷಿಪಡುತ್ತಿದ್ದರು. ಇದನ್ನೆಲ್ಲ ನೋಡುತ್ತಾ ಕುರ್ಚಿಯಲ್ಲಿ ಕುಳಿತಿದ್ದ ಜ್ಯೋತ್ಸ್ನಾ ಅಲ್ಲೇ ಕುಸಿದುಬಿದ್ದರು. ಸಂಬಂಧಿಕರು ತಕ್ಷಣ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಫಲ ಸಿಗಲಿಲ್ಲ. ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

- Advertisement -

Related news

error: Content is protected !!