Tuesday, September 22, 2026
spot_imgspot_img
spot_imgspot_img

ಕೋಣೆಗೆ ಹಾವು ಬಿಟ್ಟು ಪತ್ನಿ, ಮಗಳನ್ನು ಕೊಂದ ನೀಚ ಪತಿ..!

- Advertisement -
- Advertisement -

ಹೆಂಡತಿ-ಮಗಳು ಮಲಗಿದ್ದ ಕೋಣೆಗೆ ನಾಗರಹಾವು ಬಿಟ್ಟು ಕೊಂದಿರೋ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಅಂಧಾಬಾರ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಧ್ಯರಾತ್ರಿ ವಿಷಕಾರಿ ಹಾವು ಬಿಟ್ಟು ಸಾಯಿಸಿದ ಪತಿರಾಯ ಬೆಳಗ್ಗೆ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಗೋಳಾಡಿ ಎಲ್ಲರನ್ನೂ ನಂಬಿಸಿದ್ದಾನೆ. ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಗಂಡನ ಈ ಭಯಾನಕ ಕೃತ್ಯ ಬಯಲಾಗಿದೆ.

ಮಧ್ಯರಾತ್ರಿ ಕೊಠಡಿಗೆ ಹಾವು ಬಿಟ್ಟು ಕೊಂದಿರೋ ಗಂಡನ ಹೆಸರು ಗಣೇಶ ಪಾತ್ರಾ. ಈತನಿಗೆ ಪತ್ನಿ ಬಸಂತಿ ಪಾತ್ರಾ ಮಧ್ಯೆ ಮನೆಯಲ್ಲಿ ಆಗಾಗ್ಗೆ ಜಗಳ ನಡೆದಿತ್ತು. ಹೆಂಡತಿ ಮೇಲೆ ಕೋಪಕ್ಕೆ ಗಣೇಶ್ ಪಾತ್ರಾ ಹಾವಾಡಿಗನಿಂದ ಹಾವು ಖರೀದಿಸಿದ್ದಾನೆ. ಬಾಟಲ್‌ನಲ್ಲಿ ಹಾವು ಇಟ್ಟುಕೊಂಡು ಬಂದ ಪಾಪಿ ಗಂಡ ಮಧ್ಯರಾತ್ರಿ ಹೆಂಡತಿ ಕೊಠಡಿಗೆ ಹಾವು ಬಿಟ್ಟು ಕೊಂದಿದ್ದಾನೆ. ಬೆಳಗ್ಗೆ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಪತಿ ಗಣೇಶ್ ಪಾತ್ರಾ ಗೋಳಾಡಿದ್ದಾನೆ.

ವಿಷಕಾರಿ ಹಾವು ಕಚ್ಚಿದ ಮೇಲೆ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಹೆಂಡತಿ ಮರಣೋತ್ತರ ಪರೀಕ್ಷೆಯಲ್ಲೂ ಹಾವು ಕಡಿತದಿಂದಲೇ ಸಾವನ್ನಪ್ಪಿರೋದು ದೃಢವಾಗಿದೆ. ಆದರೆ, ಮಗಳ ಸಾವಿನ ಮೇಲೆ ಅನುಮಾನಗೊಂಡ ಬಸಂತಿ ತಂದೆ ಅಳಿಯ ಗಣೇಶ್ ಪಾತ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಪ್ಲೇಂಟ್‌ ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿದಾಗ ಗಣೇಶ್ ಪಾತ್ರಾ ಹಾವಾಡಿಗನಿಂದ ಹಾವು ಖರೀದಿಸಿದ್ದು ಬೆಳಕಿಗೆ ಬಂದಿದೆ. ಉದ್ದೇಶಪೂರ್ವಕವಾಗಿಯೇ ಕೊಠಡಿಗೆ ಹಾವು ಬಿಟ್ಟು ಕೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಗಣೇಶ್ ಪಾತ್ರಾ ತಪ್ಪೊಪ್ಪಿಕೊಂಡಿದ್ದು, ಕೊಲೆ ನಡೆದ ಒಂದೂವರೆ ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಒಡಿಶಾದಲ್ಲಿ ಹಾವು ಕಡಿತದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಇಬ್ಬರು ಸಾವನ್ನಪ್ಪಿದರೆ 8 ಲಕ್ಷ ರೂ ಪರಿಹಾರ ಪಡೆಯಲು ಪತಿ ಗಣೇಶ್ ಪಾತ್ರಾ ಹೆಂಡತಿ ಹಾಗೂ ಮಗಳನ್ನು ಕೊಲೆ ಮಾಡಿರೋ ವಿಚಾರ ಬೆಳಕಿಗೆ ಬಂದಿದೆ.

- Advertisement -

Related news

error: Content is protected !!